Published
8 months agoon
By
Akkare Newsನೆಲ್ಯಾಡಿ : ಸುಮಾರು ಆರು ವರ್ಷಗಳ ಹಿಂದೆ ನೆಲ್ಯಾಡಿ ಜಂಕ್ಷನ್ ನಲ್ಲಿದ್ದ ಕೆ. ಮೊಹಮ್ಮದ್ ಹನೀಫ್ ಎಂಬುವರ ಗೋದಾಮ್ ಕೊಠಡಿಯ ಶಟರ್ ತೆಗೆದು ಅವರು ಖರೀದಿಸಿದ ಸುಮಾರು 250 ಕೆಜಿ ಅಡಿಕೆಯನ್ನು ಯಾರೋ ಆರೋಪಿಗಳು ಕಳ್ಳತನ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿರುತ್ತಾರೆ. ಸದರಿ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಪೊಲೀಸರು ಚಪ್ಪ (ಸರ್ಪರಾಜ್) ಮತ್ತು ಅಬ್ದುಲ್ ಅಸ್ಪರ್ (ಅಸ್ಫಕ್ ) ಎಂಬುವರನ್ನು ಆರೋಪಿಗಳೆಂದು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಸದ್ರಿ ಪ್ರಕರಣವನ್ನು ಕೈಗೆತ್ತಿಕೊಂಡು ನ್ಯಾಯಾಲಯವು ಈ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು 21ಸಾಕ್ಷಿಗಳ ಪೈಕಿ 14 ಸಾಕ್ಷಿಗಳನ್ನು ಮತ್ತು 22 ದಾಖಲೆಗಳನ್ನು ಅಭಿಯೋಜನ ಪರ ಗುರುತಿಸಲಾಗಿರುತ್ತದೆ. ಸದ್ರಿ ಪ್ರಕರಣವು ನ್ಯಾಯಾಲಯದಲ್ಲಿ ತನಿಖೆ ಹಂತದಲ್ಲಿರುವಾಗ ಸದರಿ ದೂರುದಾರ ಮೊಹಮ್ಮದ್ ಹನಿಫ್ ಮೃತಪಟ್ಟಿದ್ದು ಹಾಗೂ ಮಹಜರು ಹಾಗೂ ಇನ್ನಿತರ ಸಾಕ್ಷಿಗಳು ಅಯೋಜನ ಪರ ಸಾಕ್ಷಿಯನ್ನು ನುಡಿಯದೇ ವಿರೋಧಬಾಸವಾಗಿ ಸಾಕ್ಷಿ ನುಡಿದ ಕಾರಣ ಹಾಗೂ ಯಾವುದೇ ಸ್ವತಂತ್ರ ಸಾಕ್ಷಿಗಳು ಇಲ್ಲದ ಕಾರಣ ಆರೋಪಿಗಳು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಸಾಬೀತು ಪಡಿಸುವಲ್ಲಿ ಅಭಿಯೋಜನೆ ವಿಫಲಗೊಂಡಿರುತ್ತದೆ.
ಈ ಎಲ್ಲಾ ಕಾರಣಗಳಿಂದಾಗಿ ಆರೋಪಿಗಳನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಯಂ ಎಫ್ ಸಿ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶರಾದ ಶಿವಣ್ಣ ಹೆಚ್ ಆರ್ ರವರು ಆರೋಪಿಗಳನ್ನು ಸದರಿ ಪ್ರಕರಣದಿಂದ ದೋಷ ಮುಕ್ತರೆಂದು ತೀರ್ಪನ್ನು ನೀಡಿರುತ್ತಾರೆ ಎರಡನೇ ಆರೋಪಿ ಅಸ್ಫಕ್ ಪರವಾಗಿ ಮಹೇಶ್ ಕಜೆ ರವರು ವಾದಿಸಿರುತ್ತಾರೆ.1ನೇ ಆರೋಪಿ ಪರ ಕುಮಾರನಾಥ್ ವಕೀಲರು ವಾದಿಸಿರುತ್ತಾರೆ.