Published
8 months agoon
By
Akkare Newsಮೈಸೂರು: ಬಿಸಿಲಿನಿಂದ ಬಸವಳಿದಿದ್ದ ಧರೆಗೆ ವರುಣ ತಂಪೆರೆದಿದ್ದಾನೆ.ಮೈಸೂರಿನಲ್ಲಿ (Mysore Kodagu Rain) ಸಂಜೆ ಪ್ರಾರಂಭವಾದ ಮಳೆ ಹಲವು ಅವಾಂತರ ಮಾಡಿದೆ. ಭಾರಿ ಗಾಳಿ ಮಳೆ ಮರಗಳು ಮುರಿದು ಬಿದ್ದು ಹಲವು ವಾಹನಗಳು ಜಖಂ ಆಗಿದೆ.
ಪ್ರವಾಸಿಗರ ಸ್ವರ್ಗ ದಕ್ಷಿಣ ಭಾರತದ ಕಾಶ್ಮೀರ ಎಂದೇ ಖ್ಯಾತಿ ಪಡೆದಿದ್ದ ಕೊಡಗು 37 ಡಿಗ್ರಿಯಷ್ಟು ತಾಪಮಾನ ದಾಖಲಿಸಿದ್ದು ಇತಿಹಾಸದಲ್ಲೇ ಪ್ರಥಮ ಬಾರಿಯಾಗಿತ್ತು.
ಇಂದು ಕೊಡಗಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಸಿದ್ದಾಪುರ, ತಿತಿಮತಿ, ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಕಾಫಿ ಹಾಗೂ ಕಾಳುಮೆಣಸು ಬಿಸಿಲಿನಿಂದ ಒಣಗಿ ಹೋಗಿತ್ತು.
ಈ ಬಾರಿಯ ಕೃಷಿ ಆದಾಯದ ಭರವಸೆಯನ್ನೇ ಬಿಟ್ಟಿದ್ದ ಕೃಷಿಕರಿಗೆ ಈ ಮಳೆ ಸ್ವಲ್ಪ ಮಟ್ಟಿನ ಭರವಸೆ ಮೂಡಿಸಿದೆ.