Published
8 months agoon
By
Akkare Newsಲೋಕಸಭಾ ಅಭ್ಯರ್ಥಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿಗಳಾದ ಪದ್ಮರಾಜ್ ಆರ್ ಪೂಜಾರಿ ರವರು ಪಾಣಾಜೆ ಗ್ರಾಮದ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 06 ರಂದು ಭೇಟಿ ನೀಡಿ ದೇವರಿಗೆ ವಿಶೇಷ ಕಾರ್ತಿಕಪೂಜೆ ಮಾಡಿ ದೇವರ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರಾದ ಶ್ರೀಕೃಷ್ಣ ಬೊಳಿಲ್ಲಾಯ ಕಡಮಾಜೆ ರವರು ಸಾಲು ಹಾಕಿ ಸ್ವಾಗತಿಸಿದರು.ಜಿರ್ಣೋದ್ದಾರ ಗೊಳ್ಳುತ್ತಿರುವ ಪೂಮಾಣಿ- ಕಿನ್ನಿಮಾಣಿ ದೈವಸ್ಥಾನಕ್ಕೂ ಬೇಟಿ ನೀಡಿ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು,ಮಾಜಿ ಜಿ.ಪಂ ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ.ರಾಜಾರಾಂ, ಬಂಟ್ವಾಳ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ,ಡಿಸಿಸಿ ಪ್ರ.ಕಾರ್ಯದರ್ಶಿ ಗಿರೀಶ್ ಶೆಟ್ಟಿ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ,ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕಮಲೇಶ್ ಸರ್ವೇದೊಳಗುತ್ತು,
ಗ್ರಾ.ಪಂ ಸದಸ್ಯರಾದ ನಾರಾಯಣ ನಾಯಕ್,ನವೀನ್ ರೈ ಚೆಲ್ಯಡ್ಕ, ಪ್ರಮುಖರಾದ ಪುಷ್ಪರಾಜ್ ಶೆಟ್ಟಿ ಕೋಟೆ,ರಾಮ ನಾಯ್ಕ ಕೋಟೆ,ಸದಾನಂದ ಭರಣ್ಯ,ಶೀನಾ ಭರಣ್ಯ, ಮಾಧವ ಮಣಿಯಾಣಿ ದೇವಸ್ಯ, ಬಾಬು ರೈ ಕೋಟೆ, ನಾರಾಯಣ ನಾಯ್ಕ ನಡುಮನೆ, ಬಾಲಕೃಷ್ಣ ಪೂಜಾರಿ ಉಡ್ಡಂಗಲ, ರಾಜೇಶ್ ಪೂಜಾರಿ, ದಿನೇಶ್ ಯಾದವ್, ಧನಂಜಯ, ಕಾರ್ತಿಕ್ ಡಿ.ಜಿ, ಸುಬ್ಬ ನಾಯ್ಕ , ಸಂತೋಷ್ ಅಮೀನ್, ಗಿರೀಶ್ ಗೋಳ್ವಲ್ಕರ್,ಸದಾಶಿವ ಶೆಟ್ಟಿ ಬೆಟ್ಟಂಪಾಡಿ, ಅನಂತರಾಮ ಕೆದಂಬಾಡಿ,ರಾಮಣ್ಣ ನಾಯ್ಕ ತೂಂಬಡ್ಕ, ಪ್ರಶಾಂತ್ ತೂಂಬಡ್ಕ , ಶೀನ ಪೂಜಾರಿ ಬೊಳ್ಳಿಂಬಳ, ಕಿರಣ್ ನಾಯ್ಕ, ಬಾಬು ಪಾರ್ಪಳ ಉಪಸ್ಥಿತರಿದ್ದರು..