ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ವಿಪರೀತವಾದ ಬೇಸಿಗೆಯ ಸೆಖೆ ಹೌದು! ಇಂದು ಮಿತಿ ಮೀರಿ ಆಗುತ್ತಿದೆ ಸೆಖೆ.

Published

on

ವಿಪರೀತವಾದ ಬೇಸಿಗೆಯ ಸೆಖೆ ಹೌದು! ಇಂದು ಮಿತಿ ಮೀರಿ ಆಗುತ್ತಿದೆ ಸೆಖೆ. ಕಾರಣ ಯಾರೆಂದರೆ, ಮನುಷ್ಯರಾದ ನಾವೇ. ನಾವು ಪ್ರಕೃತಿಗೆ ಕೊಟ್ಟ ನೋವಿನ ಪರಿಣಾಮದಿಂದ ಇಂದು ಈ ಪರಿಸ್ಥಿತಿ ಎದುರಾಗಿದೆ. ಹಾನಿಕಾರಕ ವಸ್ತುವಿನ ಉರಿಯುವಿಕೆಯಿಂದ ಹೊರಬರುವ ಹೊಗೆಯು ಒಜೋನ್ ಪದರದಲ್ಲಿ ದಿನದಿಂದ ದಿನಕ್ಕೆ ರಂಧ್ರಗಳು ಹೆಚ್ಚಾಗುವಂತೆ ಮಾಡುತ್ತಿದೆ.

ಇದರ ಪರಿಣಾಮದಿಂದ ಸೂರ್ಯನ ಪ್ರಕಾಶಮಾನವಾದ ಬೆಳಕು ನೇರವಾಗಿ ಭೂಮಿಗೆ ಬಿದ್ದು ವಾತಾವರಣದ ಹವಾಮಾನವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆಯೆಂದು ಹೇಳಬಹುದು. ಜನರು ಇಂದು ತಂಪಾದ ಗಾಳಿಗಾಗಿ ಪರದಾಡುವಂತಹ ಸನ್ನಿವೇಶ ಎದುರಾಗಿದೆ.

ಸೆಖೆಯಿಂದ ಜನರು ಎಲ್ಲಿಯೂ ನೆಮ್ಮದಿಯಾಗಿರಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ಮುಖದಿಂದ ಸಾಗರದಂತೆ ಹರಿಯುವ ಉಪ್ಪಿನ ನೀರನ್ನು ಕರವಸ್ತ್ರದಿಂದ ಉಜ್ಜಿ ಉಜ್ಜಿ ದಣಿದು ಸೋತು ಬಿಟ್ಟಿದ್ದಾರೆ. ಬಸ್ಸಿನಲ್ಲಿ, ಸಮಾರಂಭಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಚರ್ಚು-ಮಸೀದಿ-ದೇವಾಲಯಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ… ಎಲ್ಲಾ ಕಡೆಯೂ ಜನರ ಮಾತಿನಿಂದ ಕೇಳಿ ಬರುವ ಅಬ್ಬಾ

ಸೆಖೆಯೇ ಎಂಬ ಹಾಹಾಕಾರ ಮತ್ತು ಮಕ್ಕಳ ಚೀರಾಟವೇ ಕೇಳಿಸುತ್ತಿದೆ. ಈ ದಿನಗಳಲ್ಲಿ ಫ್ಯಾನಿನ ಗಾಳಿ ಎಷ್ಟಿದ್ದರೂ ಸಾಕಾಗುತ್ತಿಲ್ಲ. ಅದಕ್ಕೆ ಹಿಂದಿನಿಂದಲೂ ಗುರು-ಹಿರಿಯರು ಶಾಲೆಯ ಸುತ್ತಲೂ ಮರ-ಗಿಡಗಳನ್ನು ಹೆಚ್ಚಾಗಿ ಬೆಳೆಸಿಯೆಂದು. ಈಗ ಎಲ್ಲಿ ಕೇಳುತ್ತೇವೆ ಅವರ ಮಾತುಗಳನ್ನು?. ನಾವು ಮರಗಳನ್ನು ನಾಶ ಮಾಡಿ ಅವುಗಳ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣವನ್ನೇ ಮಾಡಿಬಿಡುತ್ತೇವೆ. ಇದು ಎತ್ತ ಸಾಗುತ್ತಿದೆಯೆಂದರೆ ವಿನಾಶದ ಆಂಚಿನತ್ತ ಎಂದು ಹೇಳಬಹುದು. ನಾವು ಮಾಡಿದ ಕರ್ಮವನ್ನು ನಾವೇ ಅನುಭವಿಸುತ್ತಿದ್ದೇವೆ.. ಇದು ಎಂತಹ ವಿಪರ್ಯಾಸ ಅಲ್ಲವೇ..?.







ಅಂದು ಬೇಸಿಗೆಯಲ್ಲಿ ರಜೆ ಸಿಕ್ಕ ಸಂದರ್ಭದಲ್ಲಿ ನಾವು ಹೊರಗಡೆ ಆಟವಾಡುತ್ತಿದ್ದೆವು, ಆದರೆ ಇಂದು ಮನೆಯ ಹೊಸ್ತಿಲನ್ನು ದಾಟಲು ಮನಸ್ಸಾಗುತ್ತಿಲ್ಲ! ಅಷ್ಟೂ.. ಬಿಸಿಯಾಗಿದೆ ಭೂಮಿ!. ಈಗೀಗ ಸೂರ್ಯನ ಪ್ರಕಾಶಮಾನವಾದ ಕಿರಣಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೂ ಗಂಭೀರ ಪರಿಣಾಮವನ್ನು ಬೀರಲಾರಂಭಿಸಿದೆ.

ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ಈ ಸಮಯದಲ್ಲಿ ಹೆಚ್ಚಾಗಿ ನೀರನ್ನು ಕುಡಿಯುದರಿಂದ ಮತ್ತು ಸ್ವಚ್ಛವಾದ ಹಣ್ಣು-ತರಕಾರಿ ಮತ್ತು ನಾರುಪದಾರ್ಥಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಇನ್ನಾದರೂ ಗಿಡಗಳನ್ನು ನೆಟ್ಟು ತಂಪಾದ ಪರಿಸರದ ಉಳಿಯುವಿಕೆಗಾಗಿ, ಪ್ರಕೃತಿಯ ಸಂತೋಷಕ್ಕಾಗಿ ಶ್ರಮಿಸೋಣ. ನಾವು ಸುಖವಾಗಿ ಜೀವಿಸೋಣ..ಪ್ರಾಣಿಗಳ ಓಡಾಟ-ಒಡನಾಟಗಳನ್ನು ನೋಡೋಣ.. ಅದರಂತೆ ಪಕ್ಷಿಗಳ ಸುಮಧುರವಾದ ಚಿಲಿಪಿಲಿ ನಾದವನ್ನು, ಇಂಪಾದ ಸ್ವರಗಳನ್ನು ಆಲಿಸುತ್ತಾ ನಮ್ಮ ಮುಂದಿನ ಪೀಳಿಗೆಗೂ ಪರಿಸರದ ಮಹತ್ವವನ್ನು ಸಾರೋಣ.

Continue Reading
Click to comment

Leave a Reply

Your email address will not be published. Required fields are marked *

Advertisement