ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಬ್ರೇಕಿಂಗ್ ನ್ಯೂಸ್

ಕೆನ್ನೆಗೆ ಬಾರಿಸಿದ ಶಾಸಕನಿಗೆ ತಿರುಗಿಸಿ ತಾನೂ ಹೊಡೆದ ಮತದಾರ

Published

on

ಇಂದು ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ (Voting) ನಡೆಯುತ್ತಿದ್ದು ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಿಗೆ ಬಂದು ತಮ್ಮ ಅಮೂಲ್ಯವಾದ ಹಕ್ಕನ್ನು (A valuable right) ಚಲಾಯಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಆದರೆ ಆಂಧ್ರಪ್ರದೇಶದಲ್ಲಿ (Andra Pradesh) ಮಾತನಾದ ನಡೆಯುವ ವೇಳೆ ಶಾಸಕರೊಬ್ಬರು ಮತದಾರನಿಗೆ ಕಪಾಳಮೋಕ್ಷ ಮಾಡಿದ ಘಟನೆ ವೈರಲ್ ಆಗಿದೆ.



ಗುಂಟೂರು ಜಿಲ್ಲೆಯ ತೆನಾಲಿ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿತ್ತು. ಆಗ ಬಂದ ವೈಎಸ್‌ಆರ್ ಪಕ್ಷದ ಶಾಸಕ ಎ ಶಿವಕುಮಾರ್‌ ಸರತಿ ಸಾಲು ಇದ್ದರೂ ಸಹ ಸಾಲಿನಲ್ಲಿ ನಿಂತುಕೊಳ್ಳದೇ ಮತ ಹಾಕಲು ತೆರಳಿದ್ದಾರೆ. ಆಗ ಅಲ್ಲಿದ್ದ ಒಬ್ಬ ಮತದಾರ ಕ್ಯೂನಲ್ಲಿ ನಿಂತು ಮತ ಹಾಕುವಂತೆ ಹೇಳಿದ್ದಾರೆ.



ಆತನ ಮಾತಿಗೆ ಸಿಟ್ಟಾದ ಶಾಸಕ ಶಿವಕುಮಾರ್ ತಕ್ಷಣ ಕೆನ್ನೆಗೆ ಬಾರಿಸಿದ್ದಾರೆ. ಶಾಸಕರು ಕೈ ಎತ್ತುತ್ತಿದ್ದಂತೆ ಮತದಾರನೂ ಶಾಸಕರ ಕೆನ್ನೆಗೆ ಬಾರಿಸಿದ್ದು ಶಾಸಕರ ಬೆಂಬಲಿಗರು ವ್ಯಕ್ತಿಯ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಒಂದು ನಿಮಿಷದಲ್ಲಿ ಮತಗಟ್ಟೆ ರಣಾಂಗಣವಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಇಬ್ಬರ ಮಧ್ಯೆ ಜಗಳ ನಡೆಯುವಾಗ ಯಾವೊಬ್ಬ ಭದ್ರತಾ ಸಿಬ್ಬಂದಿಯೂ (security guard) ತಪ್ಪಿಸಲು ಬರದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement