Published
11 months agoon
By
Akkare Newsಪುತ್ತೂರು : ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ವ್ಯಕ್ತಿಯೋರ್ವರು ಚಿಕಿತ್ಸೆ ಸಂದರ್ಭ ಮೃತಪಟ್ಟಿದ್ದು ಆಸ್ಪತ್ರೆಯಲ್ಲಿ ಮೃತರ ಕಡೆಯವರು ನೂರಕ್ಕೂ ಮಿಕ್ಕಿ ಜನ ಸೇರಿದ ಘಟನೆ ಮೇ.15ರಂದು ನಡೆದಿದೆ.
ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕಿನ ಕಕ್ಕೆಪದವು ಪಿಲಿಬೈಲು ನಿವಾಸಿ ಕೃಷ್ಣಪ್ಪ ಗೌಡ ಎನ್ನುವವರು ಜ್ವರ ಹಾಗೂ ನಿಶಕ್ತಿಯಿಂದ ಚಿಕಿತ್ಸೆಗೆ ಇಂದು ಮಧ್ಯಾಹ್ನ ಬಂದಿದ್ದರು.
ವೈದ್ಯರ ಸೂಚನೆಯಂತೆ ಸ್ಕ್ಯಾನಿಂಗ್ ಮಾಡಿಸಿ ಊಟ ಮಾಡಿ ಮರಳಿ ಆಸ್ಪತ್ರೆಗೆ ಬಂದವರು ಚಿಕಿತ್ಸೆ ಪಡೆಯುತಿದ್ದ ಸಂದರ್ಭ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು ಘೋಷಿಸಿದ್ದಾರೆ.
ಸಂಜೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಮೃತರ ಕಡೆಯವರು ನೂರಾರು ಜನ ಸೇರಿದ್ದರು. ಪೋಲಿಸರು ಆಸ್ಪತ್ರೆಗೆ ಭೇಟಿ ನೀಡಿದ್ದು ಇದೀಗ ಪುತ್ತೂರು ನಗರ ಠಾಣೆಗೆ ತೆರಳಿದ ಮೃತರ ಕಡೆಯವರು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.