ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಅರ್ಷದಿ ಹಳೆನೇರಂಕಿ, ಕಾರ್ಯದರ್ಶಿ ಯಾಗಿ ಆಸೀಫ್ ಅಝ್ಹರಿ ಕೊಯಿಲ ಆತೂರು

Published

on

ಆತೂರು :ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 14 ಮೇ 2024 ರಂದು ಬದ್ರಿಯಾ ಹಾಲ್ ಆತೂರಿನಲ್ಲಿ ಮುಫತ್ತಿಷ್ ಹಂಝ ಫೈಝಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸೈಯದ್ ಜುನೈದ್ ಜಿಪ್ರಿ ತಂಙಳ್ ಆತೂರು ಉದ್ಘಾಟನೆ ನೆರೆವೇರಿಸಿದರು. ಆಸೀಫ್ ಅಝ್ಹರಿ ವರದಿ ಮಂಡನೆ ಮಾಡಿದರು.

ನಂತರ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅರಿಸಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಅರ್ಷದಿ ಹಳೆನೇರಂಕಿ, ಪ್ರದಾನ ಕಾರ್ಯದರ್ಶಿ ಆಸೀಫ್ ಅಝ್ಹರಿ ಕೊಯಿಲ ಆತೂರು ಹಾಗು ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಕಿಡ್ಸ್ ಆತೂರು ರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಶೌಕತ್ ಫೈಝಿ ಗಂಡಿಬಾಗಿಲು ಹಾಗು ಅಬ್ದುರ್ರಹ್ಮಾನ್ ಫೈಝಿ ಪೆರಿಯಡ್ಕ, ಕಾರ್ಯದರ್ಶಿಯಾಗಿ ಹಾರಿಸ್ ಅಝ್ಹರಿ ನೀರಾಜೆ ಹಾಗು ಅಬೂ ಉಬೈಸ್ ಅಸ್ಲಮಿ ಆತೂರು, ಐ ಟಿ ಕೋರ್ಡಿನೇಟರ್ ರಾಗಿ ಇಮ್ತಿಯಾಜ್ ಯಮಾನಿ ಕೊಯಿಲ ಆತೂರು ರವರನ್ನು ಆಯ್ಕೆ ಮಾಡಲಾಯಿತು.



 

 

ಪರೀಕ್ಷಾ ಬೋರ್ಡ್ ಚೇರ್ಮನ್ ನಾಗಿ ಮುನೀರ್ ಯಮಾನಿ ಕುದ್ಲೂರು, ವೈಸ್ ಚೇರ್ಮನ್ ನಾಗಿ ಅಬ್ದುಲ್ಲಾ ಮುಸ್ಲಿಯಾರ್ ಕೆಮ್ಮಾರ ಹಾಗು ಸತ್ತಾರ್ ಅಸ್ನವಿ ಆತೂರು, SKSBV ಚೇರ್ಮನ್ ನಾಗಿ ಬದ್ರುದ್ದೀನ್ ಮುಸ್ಲಿಯಾರ್ ಗಂಡಿಬಾಗಿಲು, SKSBV ಕನ್ವೀನರ್ ನಾಗಿ ಮುಹಮ್ಮದ್ ಹನೀಫ್ ಅಸ್ಲಮಿ ಕುಂಡಾಜೆ ಹಾಗು ಜಿಲ್ಲಾ ಕೌನ್ಸಿಲರ್ ರಾಗಿ ಆಸೀಫ್ ಅಝ್ಹರಿ ಕೊಯಿಲ ಆತೂರು ರವರನ್ನು ನೇಮಿಸಲಾಯಿತು.

ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಹಮದ್ ಕುಂಞಿ, ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಮುಹ್ಯುದ್ದೀನ್ ಜುಮಾ ಮಸ್ಜಿದ್ ಆತೂರು ಅಧ್ಯಕ್ಷರಾದ ಹೈದರ್ ಕಲಾಯಿ, ಉಸ್ತಾದ್ ಹಂಝ ಸಖಫಿ, ಆತೂರು ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಬಿ ಕೆ ಅಬ್ದುಲ್ ರಝಕ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ 6 ಬಾರಿ ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಕಾರ್ಯದರ್ಶಿಯಾಗಿ ಹಾಗು 1 ಬಾರಿ ಅಧ್ಯಕ್ಷರಾಗಿ ಆತೂರಿಂದ ನಿರ್ಗಮಿಸಿದ ಕೆ ಎಂ ಎಚ್ ಸಿದ್ದಿಕ್ ಫೈಝಿ ಕರಾಯ ರವರಿಗೆ ಬೀಳ್ಕೊಡುಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆಸೀಫ್ ಅಝ್ಹರಿ ಸ್ವಾಗತಿಸಿ, ಮುನೀರ್ ಯಮಾನಿ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement