Published
7 months agoon
By
Akkare Newsಯುವಕನಿಂದ ಅತ್ಯಂತ ಘೋರವಾಗಿ ಹತ್ಯೆಯಾದ ಎಸ್ ಎಸ್ ಎಲ್ ಸಿಯಲ್ಲಿ ತೇರ್ಗಡೆಯಾಗಿದ್ದ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದ ಬಾಲಕಿ ಮೀನಾಳ ಮನೆಗೆ ಗೃಹ ಸಚಿವ ಜಿ ಪರಮೇಶ್ವರ್ ಇಂದು ಭೇಟಿ ನೀಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಮನುಕುಲ ಒಪ್ಪಿಕೊಳ್ಳದ ಹೇಯ ಕೃತ್ಯವನ್ನು ಆರೋಪಿ ಎಸಗಿದ್ದಾನೆ ಮತ್ತು ಪೊಲೀಸರು ಅವನನ್ನು ಈಗಾಗಲೇ ಬಂಧಿಸಿದ್ದಾರೆ. ಹಂತಕನನ್ನು ಕಠಿಣ ಶಿಕ್ಷೆಗೊಳಪಡಿಸಲು ಇಲಾಖೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಮೀನಾಳ ಕುಟುಂಬಕ್ಕೆ ನ್ಯಾಯೊದಗಿಸುವುದು ಇಲಾಖೆಯ ಆದ್ಯತೆಯಾಗಿದೆ. ಇಂಥ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಸರ್ಕಾರ ವಿಶೇಷ ಕೊರ್ಟ್ ಗಳನ್ನು ಸ್ಥಾಪಿಸುತ್ತಿದೆ ಮತ್ತು ಮೀನಾ ಪ್ರಕರಣದ ವಿಚಾರಣೆಗೂ ಒಂದು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು. ಮೀನಾಳ ಕುಟುಂಬದ ಸ್ಥಿತಿಯನ್ನು ನೋಡಲಾಗಲ್ಲ, ಮನೆಯಲ್ಲಿ ಬಹಳ ಬಡತನವಿದೆ, ಈ ಕುಟುಂಬದ ಜೊತೆ ಇಷ್ಟು ದೊಡ್ಡ ಅನ್ಯಾಯ ಜರುಗಬಾರದಿತ್ತು ಎಂದು ಪರಮೇಶ್ವರ್ ಹೇಳಿದರು.