Published
7 months agoon
By
Akkare Newsಪುತ್ತೂರು :ಮೇ 17: ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಯೊಂದು ನಾಪತ್ತೆಯಾಗಿದ್ದು, ನಾಪತ್ತೆಯಾಗಿರು ಹೋರಿಗಾಗಿ ಬಜರಂಗದಳದ ಕಾರ್ಯಕರ್ತರು ದೈವದ ಮೊರೆ ಹೋಗಿದ್ದಾರೆ.
ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಎರಡು ಹೋರಿಗಳು ಮೇ 1 ರಿಂದ ನಾಪತ್ತೆಯಾಗಿತ್ತು. ಹೆಚ್ಚಾಗಿ ದೇವಸ್ಥಾನದ ವಠಾರದಲ್ಲೇ ಸುತ್ತುತ್ತಿದ್ದ ಎರಡು ಹೋರಿಗಳು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದವು. ಈಗಾಗಲೇ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಬಜರಂಗದಳ, ಹೋರಿಗಾಗಿ ದೈವದ ಮೊರೆ ಹೋಗಿದೆ.ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಹೋರಿ ಅಡ್ಯನಡ್ಕ ಸಮೀಪವಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಹೋರಿ ಬದುಕಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಹೋರಿಯನ್ನ ಮಾಂಸಕ್ಕಾಗಿ ಕೊಂಡುಹೋಗಿರುವ ಸಾಧ್ಯತೆ ಎಂದು ಪ್ರಶ್ನಾಚಿಂತನೆಯಲ್ಲಿ ಸೂಚನೆ ಸಿಕ್ಕಿದೆ.
ಈ ಹಿನ್ನಲೆ ಬಜರಂಗದಳ ಕಾರ್ಯಕರ್ತರು ಕಾರಣಿಕ ಕ್ಷೇತ್ರ ಬಲ್ನಾಡು ಉಳ್ಳಾಲ್ತಿ ಅಮ್ಮನ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಹೋರಿ ಕಳ್ಳತನಗೈದವರಿಗೆ ತಕ್ಕ ಪಾಠ ದೈವದ ಮೂಲಕ ಸಿಗುವಂತೆ ಪ್ರಾರ್ಥಿಸಿದ್ದಾರೆ.