Published
7 months agoon
By
Akkare News
ಪುತ್ತೂರು, ಮೇ,17:ಗ್ರಾಮ ಪಂಚಾಯತಿ ಕೋಡಿಂಬಾಡಿ ಮತ್ತು ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ದಿನಾಂಕ 16-5-2024 ರಂದು ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ನಡೆಯಿತು. ಶಿಬಿರವನ್ನು ಮಕ್ಕಳಿಂದ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯಿತ್ ಸದಸ್ಯರಾದ ಶ್ರೀ. ರಾಮಣ್ಣ ಗೌಡ ಗುಂಡೋಲೆಯವರು ವಹಿಸಿದ್ದರು. ಇವರು ಮಕ್ಕಳಿಗೆ ಬೇಸಿಗೆ ಶಿಬಿರದ ಪ್ರಯೋಜನಗಳನ್ನು ತಿಳಿಸಿದರು .ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶ್ರೀಮಣಿ ಉಪನ್ಯಾಸಕರು ಸಂತ ಫಿಲೋಮಿನಾ ಶಾಲೆ ಪುತ್ತೂರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಸುಂದರ ಚಿತ್ರಕಲಾ ಶಿಕ್ಷಕರು ಸುಧಾನ ವಸತಿಯುತ ಶಾಲೆ ನೆಹರು ನಗರ, ಪುತ್ತೂರು ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಣ್ಣು .ಪಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಗ್ರಂಥಾಲಯದ ಮೇಲ್ವಿಚಾರಕರಾದ ಶ್ರೀಮತಿ ಕುಸುಮ ವಿ.ರೈಅತಿಥಿಗಳನ್ನು ಸ್ವಾಗತಿಸಿದರು. M.S.W. ವಿದ್ಯಾರ್ಥಿ ವಿನುತಾ ಬಿ ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಜಯಶ್ರೀ ಧನ್ಯವಾದ ವಿತ್ತರು.ಮನೋಜ್ ಕುಮಾರ್ ಸಹಕರಿಸಿದ್ದರು. ಶಿಬಿರದಲ್ಲಿ ಮಕ್ಕಳಿಗೆ ಕಲರ್ ಪೇಪರ್ ನಿಂದ ಕ್ರಾಫ್ಟ್ ಮಾಡಲಾಯಿತು.ಸುಮಾರು 45 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಎರಡನೇ ದಿನದಲ್ಲಿ ಮಕ್ಕಳಿಗೆ ಡ್ರಾಯಿಂಗ್ ಹಾಗೂ ವಿವಿಧ ಆಟಗಳನ್ನು ಕಳಿಸಿಕೊಡಲಾಯಿತು. ತರಬೇತುದಾರರಾದ ಶ್ರೀ ಸುಂದರ್ ಕಜೆ ಹಾಗೂ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಕುಸುಮ ವಿ. ರೈ ಮತ್ತು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ B.S.W ವಿದ್ಯಾರ್ಥಿನಿಯರು ನಡೆಸಿಕೊಟ್ಟರು.ಶಿಬಿರದ ಕೊನೆಯ ದಿನದಲ್ಲಿ ಮಕ್ಕಳಿಗೆ ಕಲರ್ ಪೇಪರ್ ನಿಂದ ಹಲವಾರು ತರಹದ ಮುಖವಾಡಗಳನ್ನು ಕಳಿಸಿಕೊಡಲಾಯಿತು. ಉಪ್ಪಿನಂಗಡಿಯ B.S.W ವಿದ್ಯಾರ್ಥಿನಿ ನಹಿಲಾ ಬಾನು ಇವರು ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಮತ್ತು ನಡವಳಿಕೆಯ ಬಗ್ಗೆ ತಿಳಿಸಿಕೊಟ್ಟರು .ನಂತರ ಅಪರಾಹ್ನ 12:30ಕ್ಕೆ ಸರಿಯಾಗಿ ಸಮಾರೋಪ ಸಮಾರಂಭ ನಡೆಯಿತು.
ಅಧ್ಯಕ್ಷತೆ ಯನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ್ ಪೂಜಾರಿ ಅವರು ವಯಿಸಿದರು, ಮುಖ್ಯ ಅತಿಥಿಗಳಾಗಿ ಕೋಡಿಂಬಾಡಿ ಗ್ರಾಮ ಪಂಚಾಯಿತ್ ಉಪಾಧ್ಯಕ್ಷರಾದ ಶ್ರೀ ಜಯಪ್ರಕಾಶ್ ಬದಿನಾರು ಹಾಗೂ ಕೋಡಿಂಬಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಪಾಲ್ಗೊಂಡಂತಹ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸುಂದರ್ ಅವರಿಗೆ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದಂತಹ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಕುಸುಮ ವಿ. ರೈ ಅವರಿಗೆ ಪ್ರಶಂಸನಾ ಪತ್ರ ಮತ್ತು ಸ್ಮರಣೆಗೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ B S.Wವಿದ್ಯಾರ್ಥಿನಿಯರಾದ ನಹೀಲಾ ಬಾನು ಇವರು ನಿರೂಪಿಸಿದರು. ಸಫ್ರೀನಾ. ಬಿ ಇವರು ಸ್ವಾಗತಿಸಿ, ಅಬಿದ ಇ
ಅವರು ವಂದಿಸಿದರು. ಪಂಚಾಯತ್ ಸಿಬ್ಬಂದಿ ಗಳಾದ ಸುರೇಶ್ ಕಿನ್ನಿತಪಲಿಕೆ, ಸುರೇಶ, ಲೀಲಾವತಿ ಸಹಕರಿಸಿದರು. ನಂತರ ಕಾರ್ಯಕ್ರಮದಲ್ಲಿ ಲಘು ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಕೋಡಿಂಬಾಡಿ ಪಂಚಾಯತ್ ವತಿಯಿಂದ ನೀಡಲಾಯಿತು . 3 ದಿವಸದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಬಹಳ ಯಶಸ್ವಿಯಾಗಿ ನಡೆಯಿತು.