Published
8 months agoon
By
Akkare News
ಉಪ್ಪಿನಂಗಡಿ : ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಪಧಾದಿಕಾರಿಗಳ ಆಯ್ಕೆಯೂ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ಸಮಸ್ತ ಮುಫತ್ತಿಶ್ ಉಸ್ತಾದರಾದ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಬೋಳಂತೂರ್ ಇವರ ಅಧ್ಯಕ್ಷತೆಯಲ್ಲಿ, ಕರುವೇಲು ಖತೀಬ್ ಉಸ್ತಾದರಾದ ಬಹು ಅನಸ್ ಅಲ್ ಹಾದಿ ತಂಙಳ್ ಇವರ ಪ್ರಾರ್ಥನೆ ಹಾಗೂ ಉಧ್ಘಾಟನೆಯೊಂದಿಗೆ ನಡೆಯಿತು.
ಉಪ್ಪಿನಂಗಡಿ ಕೇಂದ್ರ ಮದ್ರಸ ಸದರ್ ಉಸ್ತಾದರಾದ ಅಶ್ರಫ್ ಹನೀಫಿ ಸ್ವಾಗತ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಅಸ್ಲಮಿ ಕರಾಯ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ನಡೆಸಿದರು.
ಸಭಾಧ್ಯಕ್ಷ ರಾದ ಮುಫತ್ತಿಶ್ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಅಧ್ಯಕ್ಷೀಯ ಭಾಷಣದ ಬಳಿಕ ಈ ಒಂದು ಅಧ್ಯಯನ ವರ್ಷದಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಸಮಸ್ತ ಮುದರ್ರಿಬ್ ಅಬೂಬಕರ್ ರಿಯಾಝ್ ರಹ್ಮಾನಿ ಕಿನ್ಯ ತರಬೇತಿ ನಡೆಸಿಕೊಟ್ಟರು.
ನಂತರ 2024-25ನೇ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ K H ಅಶ್ರಫ್ ಹನೀಫಿ ಕರಾಯ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಎಂ ಅಬ್ದುಲ್ ಜಬ್ಬಾರ್ ಅಸ್ಲಮಿ ಕರಾಯ, ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಹಾಜಿ ಕೊಲ್ಲೆಜಾಲ್,
ಐ ಟಿ ಕೋಡಿನೇಟರಾಗಿ ರಝಾಕ್ ದಾರಿಮಿ ನೇರಂಕಿ, ಪರೀಕ್ಷಾ ಬೋರ್ಡ್ ಚೆಯರಾಗಿ ಝಕರಿಯಾ ಮುಸ್ಲಿಯಾರ್ ಆತೂರು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಯೂಸೂಫ್ ಮುಸ್ಲಿಯಾರ್ ಕರಾಯ ಹಾಗು ಉಸ್ಮಾನ್ ದಾರಿಮಿ ಹಳೆಗೇಟು, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಝ್ ಫೈಝಿ ಕರಾಯ ಹಾಗು ಮಸ್ತಫಾ ಫೈಝಿ ಕರಾಯ, ವೈಸ್ ಚೆಯರ್ಮಾನ್ ಗಳಾಗಿ ಇಲ್ಯಾಸ್ ದಾರಿಮಿ ಅಂಡಕೇರಿ ಹಾಗು ಮನ್ಸೂರ್ ಯಮಾನಿ ಸರಳಿಕಟ್ಟೆ, SKSBV ಚೆಯರ್ಮಾನಾಗಿ ಅಬ್ದುಲ್ ಹಮೀದ್ ಹನೀಫಿ ಕುಂಡಾಜೆ, SKSBV ಕನ್ವೀನರಾಗಿ ಯಹ್ಯಾ ಫೈಝಿ ಕೊಯಿಲ, ಮೀಡಿಯಾ ವಿಂಗ್ ಚೆಯರ್ಮಾನಾಗಿ ತಮೀಮ್ ಅನ್ಸಾರಿ ಕುಂಡಾಜೆ, ಕನ್ವೀನರಾಗಿ ರಾಝಿಕ್ ಯಮಾನಿ ಸವಣೂರು, ಕರುನ್ನುಗಳ್ ಸಂಚಾಲಕರಾಗಿ ಹಂಝ ಮುಸ್ಲಿಯಾರ್ ಹೀರೆಬಂಡಾಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾದ H ಯೂಸುಫ್ ಹಾಜಿ, ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಪ್ರತಿನಿಧಿ ಹಮೀದ್ ಕರಾವಳಿ, ಮುಹಮ್ಮದ್ ಕೂಟೇಲು, ಅಂಡೆತ್ತಡ್ಕ ಮಸೀದಿ ಅಧ್ಯಕ್ಷರು ಉಪ್ಪಿನಂಗಡಿ ರೇಂಜ್ ವ್ಯಾಪ್ತಿಯ ಎಲ್ಲಾ ಮದ್ರಸಗಳ ಉಸ್ತಾದರುಗಳು ಭಾಗವಹಿಸಿದ್ದರು.
ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್ ಫೈಝಿ ಕರಾಯ ದನ್ಯವಾದಗೈದರು.