Published
11 months agoon
By
Akkare Newsಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು, ಪೆರ್ನಾಜೆ ಸಮೀಪ ತಿರುವಿನಲ್ಲಿ ಪಲ್ಟಿಯಾದ ಘಟನೆ ಇಂದು ಸಂಭವಿಸಿದೆ, ಪರಿಣಾಮ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದಾನೆ.
ಮೈಸೂರಿನಿಂದ ಮಂಗಳೂರಿಗೆ ಟೊಮ್ಯಾಟೊ ಹೊತ್ತೊಯ್ಯತ್ತಿದ್ದ ಲಾರಿ ಆನೆಗುಂಡಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದು ಸಮೀಪದ ಕಂದಕಕ್ಕೆ ಉರುಳಿ ಪಲ್ಟಿಯಾಗಿದ್ದು, ಪರಿಣಾಮವಾಗಿ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತೆಂದು ತಿಳಿದುಬಂದಿದೆ. ಲಾರಿಯನ್ನು ಕ್ರೈನ್ ಮೂಲಕ ಮೇಲೆತ್ತಲಾಗಿರುವುದಾಗಿ ತಿಳಿದುಬಂದಿದೆ.