Published
7 months agoon
By
Akkare Newsಬೆಳ್ತಂಗಡಿ :ಮೇಲಂತಬೆಟ್ಟು ಅಕ್ರಮ ಕೋರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಶಾಸಕ ಹರೀಶ್ ಪೂಂಜ ಆಪ್ತ ಬಿಜೆಪಿ ಯುವ ಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿ ಮೇಲೆ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಮೇಲೆ ಎಫ್.ಐ.ಆರ್ ದಾಖಲಾದ ಹಿನ್ನೆಲೆ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾತ್ರೋ ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹರೀಶ್ ಪೂಂಜ ದೌಡಾಯಿಸಿದ್ದು, ಆರೋಪಿಯನ್ನ ಬಿಡುಗಡೆ ಮಾಡುವಂತೆ ಹೈಡ್ರಾಮಾ ಮಾಡಿದ್ದಾರೆ. ಅಮಾಯಕ ಕಾರ್ಯಕರ್ತನನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಎಫ್.ಐ.ಆರ್ ದಾಖಲಾದ ಹಿನ್ನಲೆ ಆರೋಪಿಯನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಬೆಳಗಿನ ಜಾವ 5 ಗಂಟೆವರೆಗೂ ಠಾಣೆಯಲ್ಲೇ ಶಾಸಕರು ಮೊಕ್ಕಮ್ ಹೂಡಿದ್ದಾರೆ ಎಂದು ವರದಿಯಾಗಿದೆ.