Published
7 months agoon
By
Akkare News
ಪುತ್ತೂರು: ಉಪ್ಪಿನಂಗಡಿ ಪೇಟೆಯ ಹೃದಯ ಭಾಗದಲ್ಲಿ ಕಳೆದ 40 ವರ್ಷಗಳಿಂದ ಇತ್ಯರ್ಥವಾಗದೇ ಇದ್ದ ಡ್ರೈನೇಜ್ ಸಮಸ್ಯೆಯನ್ನು ಶಾಸಕ ಅಶೋಕ್ ರೈ ಯವರು ಇತ್ಯರ್ಥಪಡಿಸಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ. ಇಂದು ಉಪ್ಪಿನಂಗಡಿಗೆ ಭೇಟಿ ನೀಡಿದ ಶಾಸಕರು ಕಾಮಗಾರಿ ವೀಕ್ಷಣೆ ಮಾಡಿದರು.
ಮಳೆ ನೀರು, ಮತ್ತು ನಗರದ ಕೊಳಚೆ ನೀರು ಪ್ರತೀ ಮಳೆಗಾಲದಲ್ಲಿ ರಸ್ತೆಯ ಮೂಲಕ ಹರಿದು ಹೋಗುತ್ತಿತ್ತು. ಪ್ರತೀ ಮಳೆಗಾಲದಲ್ಲಿ ಈ ಪರಿಸರದ ಮನೆ ಮಂದಿ, ಅಂಗಡಿ ವ್ಯಾಪಾರಸ್ಥರು ನರಕಯಾತನೆ ಅನುಭವಿಸುವಂತಾಗಿತ್ತು. ರಾ. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇದೇ ವೇಳೆ ಇಲ್ಲಿನ ಚರಂಡಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಶಾಸಕರು ಇಂಜಿನಿಯರ್ ಗಳಿಗೆ ಸೂಚನೆಯನ್ನು ನೀಡಿದ್ದರು. ಇದೀಗ ಈ ಬಾರಿಯ ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳ್ಳಲಿದ್ದು ಬಹು ವರ್ಷಗಳ ಸಮಸ್ಯೆ ಈ ಬಾರಿ ಇತ್ಯರ್ಥಗೊಂಡಿದೆ.
ಬೈಟ್
ಕಳೆದ ಹಲವು ವರ್ಷಗಳಿಂದ ಜನ ಸಂಕಷ್ಟ ಎದುರಿಸುವಂತಾಗಿತ್ತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಪೇಟೆಯ ಕೊಳಚೆ ನೀರುಒಂದೆಡೆ ಶೇಖರಣೆಯಾಗಿ ದುರ್ವಾಸನೆ ಹೊಡೆಯುತ್ತಿತ್ತು. ಒಂದು ತಲೆಮಾರೇ ಇಲ್ಲಿನ ದುಸ್ಥಿತಿಯನ್ನು ಕಂಡು ರೋಸಿ ಹೊಗಿದ್ದು ಈ ಬಾರಿ ಅದು ಕ್ಲೀಯರ್ ಆಗಿದೆ.
ಅಶೋಕ್ ರೈ ಶಾಸಕರು ಪುತ್ತೂರು