Published
7 months agoon
By
Akkare News
ಬೆಳ್ತಂಗಡಿ ಶಾಸಕರ ಮನೆಗೆ ರೌಂಡಪ್ ಹಾಕಿದ ಪೋಲೀಸ್ ಪಡೆ: ಪೂಂಜ ನಿವಾಸಕ್ಕೆ ಕಾರ್ಯಕರ್ತರ ದೌಡು
ಪೋಲಿಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಮಾಡಿದ ಪ್ರಕರಣ ಹಾಗೂ ಅನುಮತಿ ಇಲ್ಲದೆ ಬಿಜೆಪಿಯಿಂದ ಪ್ರತಿಭಟನಾ ಸಭೆ ನಡೆಸಿದ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ವಿರುದ್ಧ ಈಗ ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳು ಜಾಮೀನು ರಹಿತ ಪ್ರಕರಣವಾಗಿದ್ದು ಇದೀಗ ಹರೀಶ್ ಪೂಂಜ ಅವರ ಬಂಧನಕ್ಕಾಗಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಪೂರ್ ಮಠ್ ಮತ್ತು ಪಿಎಸ್ಐ ಚಂದ್ರಶೇಖರ್ ಶಾಸಕರ ಮನೆಗೆ ಆಗಮಿಸಿದ್ದಾರೆ
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿತ್ತಿಲ ನಿವಾಸಕ್ಕೆ ಆಗಮಿಸಿದ್ದು, ಹರೀಶ್ ಪೂಂಜ ಮನೆಯ ರೂಂ ನಲ್ಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಿಳಿಯುತ್ತಲೇ ಹಲವಾರು ಕಾರ್ಯಕರ್ತ ಹರೀಶ್ ಪೂಂಜ ನಿವಾಸಕ್ಕೆ ಆಗಮಿಸಿದ್ದು, ಸರಕಾರದ ವಿರುದ್ಧ ಹಾಗೂ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.