Published
7 months agoon
By
Akkare Newsಮಂಗಳೂರು: ಭಾರೀ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಪಾರ್ಕ್ ಮಾಡಿರುವ ಎರಡು ಕಾರುಗಳು ಜಖಂಗೊಂಡ ಘಟನೆ ನಗರದ ಕರಂಗಲಪಾಡಿ ಬಳಿಯ ಕೋರ್ಟ್ ಸಂಪರ್ಕ ರಸ್ತೆಯ ಬಳಿ ನಡೆದಿದೆ. ಈ ಘಟನೆ ಮಂಗಳವಾರ ರಾತ್ರಿ 9.30ವೇಳೆಗೆ ನಡೆದಿದೆ. ಕರಂಗಲಪಾಡಿಯಿಂದ ಕೋರ್ಟ್ ಸಂಪರ್ಕ ರಸ್ತೆಯ ಬುಡದಲ್ಲಿಯೇ ಆಮ್ಲೇಟ್ ಅಂಗಡಿಯಿದ್ದು, ಈ ವೇಳೆ ಅಲ್ಲಿ ಹೆಚ್ಚಿನ ಗ್ರಾಹಕರೂ ಇದ್ದರು.
ಅಲ್ಲಿಯೇ ಪಕ್ಕದಲ್ಲಿರುವ ಭಾರೀ ಗಾತ್ರದ ಆಲದ ಮರದ ಕೊಂಬೆ ಮುರಿದುಬಿದ್ದಿದೆ. ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದು, ವಾಹನಗಳ ಒಳಗಡೆ ಯಾರೂ ಇರಲಿಲ್ಲ. ಆದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಲ್ಲದೆ ಕೊಂಬೆ ಮುರಿದುಬೀಳುವ ವೇಳೆಗೆ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸದ ಪರಿಣಾಮ ಭಾರೀ ಅನಾಹುತ ತಪ್ಪಿದಂತಾಗಿದೆ. ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ದೌಡಾಯಿಸಿದೆ. ಅಲ್ಲದೆ ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿದ್ದಾರೆ. ಘಟನೆಯಿಂದ ಎರಡು ಕಾರುಗಳು ಜಖಂಗೊಂಡಿದೆ.