Published
7 months agoon
By
Akkare Newsಪುತ್ತೂರು : ಹೃದಯಾಘಾತದಿಂದ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ನಿವಾಸಿ ಪಿ.ಬಾಬು (55) ಮೃತಪಟ್ಟಿದ್ದಾರೆ.
ಬಾಬು ಅವರು ಮನೆಯ ಹೊರಗೆ ಮಳೆಯಲ್ಲಿ ಕೆಲಸ ಮಾಡಿ ಬಳಿಕ ಒಳ ಹೋದವರು ನೀರು ಕುಡಿದ ತಕ್ಷಣ ಹೃದಯಾಘಾತವಾಗಿ ಮೃತಪಟ್ಟರು ಎನ್ನಲಾಗಿದೆ.
ಬಾಬು ಅವರು ಮನೆಯ ಹೊರಗೆ ಮಳೆಯಲ್ಲಿ ಕೆಲಸ ಮಾಡುತ್ತಿದ್ದು, ಸಿಡಿಲಾಘಾತದಿಂದ ಮೃತಪಟ್ಟಿದ್ದರು ಎಂದು ಮೊದಲು ಸುದ್ದಿಯಾಗಿತ್ತು. ವೈದ್ಯಕೀಯ ರಿಪೋರ್ಟ್ ಬಂದ ಬಳಿಕವಷ್ಟೇ ತಿಳಿದುಬರಬೇಕಿದೆ ಎಂದು ತಹಶೀಲ್ದಾರ್ ಕುಂಞ ಅಹಮ್ಮದ್ ತಿಳಿಸಿದ್ದಾರೆ.