Published
7 months agoon
By
Akkare Newsಬೆಳ್ತಂಗಡಿಯ ಮೇಲಂತಬೆಟ್ಟು ಗ್ರಾಮದ ಮೂಡಲದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ(35ವ)ಗೆ ಮೇ 27ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಬಂಧಿತ ಶಶಿರಾಜ್ ಶೆಟ್ಟಿಯವರನ್ನು ಮೇ 24ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಅವರಿಗೆ ಪೊಲೀಸ್ ಕಸ್ಟಡಿ ವಿಧಿಸಿದೆ. ಶಶಿರಾಜ್ ಶೆಟ್ಟಿ ಪರ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಾದ ಮಂಡಿಸಿದ್ದು ಸರಕಾರದ ಪರವಾಗಿ ಎಪಿಪಿಗಳಾದ ದಿವ್ಯರಾಜ್ ಹೆಗ್ಡೆ ಮತ್ತು ಅಶಿತಾ ವಾದಿಸಿದ್ದರು.
ಮೂವರ ವಿರುದ್ಧ ಖಾಸಗಿ ಕೇಸು: ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದಡಿ ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಮೂವರ ವಿರುದ್ಧ ಖಾಸಗಿ ಕೇಸು ದಾಖಲಿಸಲಾಗಿದೆ.ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಗಿರೀಶ್ ಮೋಹನ್ ಎಸ್. ಎನ್. ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆರವರು ಪ್ರಮೋದ್ ಉಜಿರೆ ಪಯ್ಯ ಗುಡ್ಡದ ಮನೆ ದಿಡುಪೆ, ಮಲವಂತಿಗೆ ಗ್ರಾಮ ಬೆಳ್ತಂಗಡಿ, ಶಶಿರಾಜ್ ಶೆಟ್ಟಿ ಕಡಂಬು ಮನೆ ಮೇಲಂತಬೆಟ್ಟು ಗ್ರಾಮ & ಅಂಚೆ ಬೆಳ್ತಂಗಡಿ, ಮತ್ತು ಲೋಕನಾಥ ಪೂಜಾರಿ (ಸೂರಪ್ಪ ಪೂಜಾರಿ) ಮೂಡಲ ಮನೆ, ಮೇಲಂತಬೆಟ್ಟು ಅಂಚೆ ಬೆಳ್ತಂಗಡಿರವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಂಡ ಪ್ರಕ್ರಿಯಾ ಸಂಹಿತೆ ಕಲಂ 200 ಮತ್ತು ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ 1957 ರ ಕಲಂ 4(1) ಮತ್ತು ಕಲಂ 9 ಮತ್ತು 21, 23 ಸಿ ಮತ್ತು ಕರ್ನಾಟಕ ಉಪಖನಿಜ ರಿಯಾಯಿತಿ 1994 5 3 20205 2 3(1), 36(3), 42(1), 43(2) 2 44 0ರಡಿ ಪ್ರಕರಣ ದಾಖಲಿಸಲಾಗಿದ್ದು ಈ ಪ್ರಕರಣದಲ್ಲಿ ಫಿರ್ಯಾದಿದಾರರು ಮೇಲ್ಕಾಣಿಸಿದ ಕಾಯಿದೆಗಳನ್ವಯ ಮತ್ತು ಕರ್ನಾಟಕ ಸರ್ಕಾರದ ನಿಯಾಮಾನುಸಾರ ತನಿಖೆ ನಡೆಸಿ ಫಿರ್ಯಾದಿಯನ್ನು ಸಲ್ಲಿಸಲು ಅಧಿಕಾರ ಹೊಂದಿರುತ್ತಾರೆ.
ಈ ಪ್ರಕರಣವು ನ್ಯಾಯಾಲಯದ ಸರಹದ್ದಿನ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದ್ದು ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಹೊಂದಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬ ಸ್ಥಳದಲ್ಲಿರುವ ಸರ್ವೆ ನಂ 12 ರಲ್ಲಿ ಅಕ್ರಮ ಕಟ್ಟಡ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಸದರಿ ಪ್ರದೇಶಕ್ಕೆ ತಹಶೀಲ್ದಾರರು ದಿನಾಂಕ 18-05-2024 ರಂದು 19:30 ಗಂಟೆ ಸಮಯಕ್ಕೆ ಗ್ರಾಮ ಸಹಾಯಕ ರಹಾನ್, ತಾಲ್ಲೂಕು ಕಛೇರಿ ಸಿಬ್ಬಂದಿ ಪ್ರಜ್ವಲ್, ಬೆಳ್ತಂಗಡಿ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ್ ಜೊತೆಗೂಡಿ ದಾಳಿ ನಡೆಸಿದ್ದು, ದಾಳಿಯಲ್ಲಿ ಅಕ್ರಮ ಕಲ್ಲು ತೆಗೆದಿರುವುದರ ಬಗ್ಗೆ ಹಾಗೂ ಅದರ ರಾಶಿ ಮತ್ತು ಸಿಡಿ ಮದ್ದುಗಳು ಸ್ಥಳದಲ್ಲಿಯೇ ಸಿಕ್ಕಿರುವುದಾಗಿ ಹಾಗೂ ಹಿಟಾಚಿ-1, ಟ್ರಾಕ್ಟರ್-1, ಮದ್ದುಗುಂಡು ಜೀವಂತ 4, ಮದ್ದುಗುಂಡು ಬಳಸಿದಂತಹ 4 ಹಾಗೂ ಕೆಲಸದವರು (1) ನಿತೇಶ್, (2) ಚಂದ್ರಶೇಖರ, (3) ಪ್ರಮೋದ್, (4) ರಾಜೇಶ್ ಇದ್ದು ಇದರಲ್ಲಿ ನಿತೇಶ್ ಎಂಬಾತನನ್ನು ವಿಚಾರಿಸಲಾಗಿ, ಈ ಅಕ್ರಮ ಗಣಿಗಾರಿಕೆಯನ್ನು ಪ್ರಮೋದ್ ಉಜಿರೆ ಮತ್ತು ಶಶಿರಾಜ್ ರವರು ಮಾಡುತ್ತಾರೆಂದು ತಿಳಿಸಿರುತ್ತಾರೆ.ಗಣಿಗಾರಿಕೆ ಸ್ಥಳದಲ್ಲಿ ಸಿಕ್ಕ ವಸ್ತುಗಳು (1) ಹಿತಾಚಿ ಲೇ & I ಕೋಮತ್ ಸು PC 71-1 ಇದರ ಅಂದಾಜು ಮೌಲ್ಯ ರೂ. 3 ಲಕ್ಷ ಆಗಬಹುದು (2) Tractor-1 No. KA 21 T 134 ಇದರ ಅಂದಾಜು ಮೌಲ್ಯ ರೂ. 1 ಲಕ್ಷ (3) ಬಳಸಿದ ಮದ್ದುಗುಂಡುಗಳು ವಯರ್ ಸಮೇತ-4 (4) ಜೀವಂತ ಮದ್ದುಗುಂಡುಗಳು-4 (5) ಒಡೆದ ಕಲ್ಲುಗಳನ್ನು ಸ್ಥಳದಲ್ಲಿಯೇ ಇರಿಸಿ ಜಪ್ತಿಮಾಡಿದ ಸೊತ್ತುಗಳನ್ನು ಸುಪರ್ದಿಗೆ ತೆಗೆದುಕೊಂಡು ಅಕ್ರಮ ಕಲ್ಲು ಗಣಿಗಾರಿಕೆ ಚಟುವಟಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.