Published
7 months agoon
By
Akkare Newsಪುತ್ತೂರು:ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶ್ರಮಿಸಿದ, ದೇವಳದ ಮಾಜಿ ಮೋಕ್ತೇಸರರು,ಸಮಾಜದ ರಾಜಕೀಯ, ಧಾರ್ಮಿಕ,ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನಿತ್ತ,ಅನುಭವಿ, ಹಿರಿಯರಾದ ಶ್ರೀ ರಾಜೇಂದ್ರ ಆರಿಗ ರು ಸ್ವರ್ಗಸ್ಥರಾಗಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ದೈವಾಧೀನರಾದ ಶ್ರೀಯುತರ ಆತ್ಮಕ್ಕೆ ಸದ್ಗತಿಯನ್ನು ಕೋರಿ “ನುಡಿ ನಮನ ಮತ್ತು ಶೃದ್ಧಾಂಜಲಿ ಸಭೆ” ಯನ್ನು ನಮ್ಮ ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈಯವರ ಅಧ್ಯಕ್ಷತೆಯಲ್ಲಿ ನಾಳೆ ದಿನಾಂಕ 26-05-2024 ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 12:00 ಕ್ಕೆ ಸರಿಯಾಗಿ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಮರ್ದಿನಿ ದೇವಸ್ಥಾನದ “ಚಿನ್ಮಯೀ ಸಭಾಂಗಣ” ದಲ್ಲಿ ಆಯೋಜಿಸಲಾಗಿದೆ.
ಈ ಶೃದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಕೋಡಿಂಬಾಡಿ-ಬೆಳ್ಳಿಪ್ಪಾಡಿ ಗ್ರಾಮಸ್ಥರು, ಹಾಗೂ ಮೃತರ ಊರಿನ-ಪರವೂರಿನ ಹಿತೈಷಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕಾಗಿ ನಮ್ರ ವಿನಂತಿ.