Published
7 months agoon
By
Akkare Newsಮೊಗ್ರು : ಮೊಗ್ರು ಗ್ರಾಮದ ಮುಗೇರಡ್ಕ ಕಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೊಠಡಿಯೊಳಗೆ ಮಳೆಗಾಲದ ಸಮಯದಲ್ಲಿ ನೀರು ಸೋರುತಿರುವುದು ಕಂಡು ಬಂತು ಶಾಲಾ ಮುಖ್ಯೊಪಾದ್ಯಾಯರಾದ ಮಾಧವ ಗೌಡ, ಹಾಗೂ ಶಾಲಾಭಿವೃದ್ಧಿ ಸಮಿತಿ ಪಂಚಾಯತ್ ಗಮನಕ್ಕೆ ತಂದರು,
ತಕ್ಷಣ ಕಾರ್ಯಪ್ರವೃತರಾದ ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ್ ಪೂಜಾರಿ ಮತ್ತು ಬಾಲಕೃಷ್ಣ ಗೌಡ ಮುಗೇರಡ್ಕ ಇವರು ಪಂಚಾಯತ್ ಅನುದಾನದಲ್ಲಿ ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಖಂಡಿಗ ಹಾಗೂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಇವರ ಸಹಕಾರದಲ್ಲಿ ಶಾಲೆ ಪ್ರಾರಂಭಕ್ಕೂ ಮೊದಲೇ ಬಿಸಿಯೂಟ ಕಟ್ಟಡಕ್ಕೆ ಶೀಟ್ ವ್ಯವಸ್ಥೆ ಮಾಡಲಾಯಿತು. ಶಾಲಾಭಿವೃದ್ಧಿ ಸಮಿತಿ, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಬಂದಾರು ಗ್ರಾಮ ಪಂಚಾಯತ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.