Published
7 months agoon
By
Akkare Newsಬಂಟ್ವಾಳ: ಇಲ್ಲಿನ ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಕಂಪೆನಿಯು ರಸ್ತೆಗೆ ಉದ್ದಕ್ಕೆ ನಿರ್ಮಿಸಿದ ಕಬ್ಬಿಣದ ತಡೆಬೇಲಿಗೆ ಕಾರೊಂದು ಢಿಕ್ಕಿ ಹೊಡೆದು ಸಂಪೂರ್ಣವಾಗಿ ಜಖಂಗೊಂಡಿದೆ.
ಕಾರು ಗುದ್ದಿದ ಕಾರಣ ತಡೆಬೇಲಿ ಮತ್ತು ಕಾರು ನಜ್ಜುಗುಜ್ಜಾಗಿದೆ. ಈ ತಡೆಬೇಲಿ ಪರ್ಮನೆಂಟ್ ಆಗಿದ್ದು ಇದರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದರ ನಿರ್ಮಾಣ ಕಾರ್ಯ ನೋಡಿ, ಇದು ಉಳಿಯಬಹುದಾ? ಇದನ್ನು ವೇಗವಾಗಿ ಬರುವ ಗಾಡಿಗಳು ಸೀಳಿಕೊಂಡು ಹೋಗಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡವರ ಮಾಹಿತಿ ಲಭ್ಯವಾಗಿಲ್ಲ.