Published
7 months agoon
By
Akkare Newsಮೈಸೂರು ರಾಜಮನೆತನದ ಕುಡಿ 2024ರ ಲೋಕಸಭೆ ಚುನಾವಣೆ ಮೂಲಕ ಭರ್ಜರಿಯಾಗಿ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಾಗಿದೆ. ಯದುವೀರ್ ಒಡೆಯರ್ ಅವರು ಕೊಡಗು & ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಇನ್ನೇನು ಜೂನ್ 4ಕ್ಕೆ ಮೈಸೂರು & ಕೊಡಗು ಲೋಕಸಭಾ ಕ್ಷೇತ್ರದ ಫಲಿತಾಂಶವು ಕೂಡ ಹೊರಬೀಳಲಿದೆ, ಈ ಸಮಯದಲ್ಲೇ ಗೆಲ್ಲುವ ರೇಸ್‌ನಲ್ಲಿ ಯದುವೀರ್ ಒಡೆಯರ್ ಮುಂದೆ ಓಡುತ್ತಿದ್ದಾರೆ!
ಮೈಸೂರು ಲೋಕಸಭಾ ಕ್ಷೇತ್ರವನ್ನು ಮೈಸೂರು & ಕೊಡಗು ಲೋಕಸಭಾ ಕ್ಷೇತ್ರ ಎಂದು ಕರೆಯುತ್ತಾರೆ. ಯಾಕಂದ್ರೆ ಈ ಲೋಕಸಭಾ ಕ್ಷೇತ್ರ ಎರಡೂ ಜಿಲ್ಲೆಗಳಿಗೆ ಸೇರುತ್ತದೆ. ಹೀಗೆ, ಈ ಬಾರಿ ಮೈಸೂರು & ಕೊಡಗು ಲೋಕಸಭಾ ಕ್ಷೇತ್ರವು ಇಡೀ ಭಾರತದ ಗಮನ ಸೆಳೆದಿತ್ತು. ಯಾಕಂದ್ರೆ ಮೊದಲ ಕಾರಣ ರಾಜಮನೆತನದ ವ್ಯಕ್ತಿ ಚುನಾವಣೆಗೆ ನಿಲ್ಲುತ್ತಿರುವುದು ಮತ್ತು 2ನೇ ಕಾರಣ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿ ಬೇರೆಯವರಿಗೆ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಹೀಗೆ ಭರ್ಜರಿ ತಿಕ್ಕಾಟಕ್ಕೆ ಕೂಡ ಕಾರಣವಾಗಿದ್ದ ಮೈಸೂರು & ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗ ಗೆಲ್ಲೋದು ಯಾರು ಗೊತ್ತೆ? ಮುಂದೆ ಓದಿ.
ಯದುವೀರ್ ಒಡೆಯರ್‌ಗೆ ಗೆಲುವು?
2024ರ ಲೋಕಸಭೆ ಚುನಾವಣೆ ಮುಗಿದಿದ್ದು, ಇನ್ನೇನು ಜೂನ್ 4ರ ಮಂಗಳವಾರ ರಿಸಲ್ಟ್ ಕೂಡ ಹೊರಬೀಳುತ್ತದೆ. ಹೀಗಿದ್ದಾಗ ಮೈಸೂರು & ಕೊಡಗು ಲೋಕಸಭಾ ಕ್ಷೇತ್ರ ಯಾರಿಗೆ ಒಲಿಯಲಿದೆ? ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳುತ್ತಾ? ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌ಗೆ ಗೆಲುವು ಸಿಗುತ್ತಾ? ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಇಲ್ಲಿ ಕಮಾಲ್ ಮಾಡುತ್ತಾರಾ? ಎಂಬ ಪ್ರಶ್ನೆಗಳು ಭರ್ಜರಿಯಾಗಿ ಓಡಾಡುತ್ತಿವೆ.
ಆದರೆ ಈ ಎಲ್ಲಾ ಪ್ರಶ್ನೆಗೂ ಸೋಷಿಯಲ್ ಮೀಡಿಯಾ ದೊಡ್ಡ ಅಖಾಡ ಒದಗಿಸಿದ್ದು, ಈಗಿನ ಚರ್ಚೆ ಪ್ರಕಾರ ಯದುವೀರ್ ಒಡೆಯರ್ ಗೆಲ್ಲುವ ರೇಸ್‌ನಲ್ಲಿ ಮುಂದೆ ಇದ್ದಾರೆ. ಆದ್ರೆ ಇದು ಅಧಿಕೃತವಲ್ಲ, ಹೀಗಾಗಿ ಚುನಾವಣೆ ಫಲಿತಾಂಶ ಏನು ಬೇಕಾದರೂ ಆಗಬಹುದು. ಹೀಗಾಗಿ ಪಕ್ಕಾ ಫಲಿತಾಂಶ ಜೂನ್ 4ಕ್ಕೆ ಹೊರಬೀಳಲಿದೆ. ಅಲ್ಲಿಯವರೆಗೆ ಕಾದರೆ ಪಕ್ಕಾ ರಿಸಲ್ಟ್ ಕೂಡ ಸಿಗಲಿದೆ.
Uttara Kannada Lok Sabha Election 2024 Result: ಬಿಜೆಪಿ ಭದ್ರಕೋಟೆ ಉಳಿಯುತ್ತಾ? ಉರುಳುತ್ತಾ?
ಕ್ಷೇತ್ರದ ಇತಿಹಾಸ ಹೀಗಿದೆ ನೋಡಿ!
ಮೈಸೂರು & ಕೊಡಗು ಲೋಕಸಭಾ ಕ್ಷೇತ್ರ ಭಾರಿ ದೊಡ್ಡ ಇತಿಹಾಸ ಹೊಂದಿದೆ. 1952ರಲ್ಲಿ ಈ ಕ್ಷೇತ್ರಕ್ಕೆ ಮೊದಲ ಬಾರಿಗೆ ಚುನಾವಣೆ ನಡೆದಿತ್ತು. ಮೊದಲ ಬಾರಿಯ ಚುನಾವಣೆಯಲ್ಲಿ, ‘ಕಿಸಾನ್ ಮಝ್ದೂರ್ ಪ್ರಜಾ ಪಾರ್ಟಿ’ ಗೆದ್ದು ಬೀಗಿತ್ತು. ಆ ನಂತರ ಸತತವಾಗಿ ಕಾಂಗ್ರೆಸ್ ಪಕ್ಷ 1998ರ ತನಕ ಗೆದ್ದುಕೊಂಡು ಬಂದಿತ್ತು. ಆದರೆ 1998ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಶಂಕರ್ ಅವರು ಗೆದ್ದು ಬೀಗಿದ್ದರು.
ಆ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇದೆ. ಸತತ 2 ಬಾರಿ ಮೈಸೂರು & ಕೊಡಗು ಲೋಕಸಭಾ ಕ್ಷೇತ್ರದಿಂದ ಜಯ ಕಂಡಿದ್ದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಮಿಸ್ ಆಗಿತ್ತು. ಹೀಗಾಗಿ ಯದುವೀರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಯದುವೀರ್ ಮೈಸೂರಿನ ರಾಜವಂಶದ ಕುಡಿ, ಹೀಗಾಗಿಯೇ ಇಡೀ ದೇಶದ ಗಮನ ಸೆಳೆದಿತ್ತು ಮೈಸೂರು & ಕೊಡಗು ಲೋಕಸಭಾ ಕ್ಷೇತ್ರ. ಹಾಗೇ ಇಲ್ಲಿ ಗೆಲುವು ಸಾಧಿಸಲು ಬಿಜೆಪಿ & ಜೆಡಿಎಸ್ ವರಿಷ್ಠರ ಪಡೆ, ಒಗ್ಗಟ್ಟಿನಿಂದ ಪ್ರಚಾರ ಕೂಡ ನಡೆಸಿತ್ತು.