Published
7 months agoon
By
Akkare Newsಕಾನೂನು ಮಾಹಿತಿ ಶಿಬಿರ
ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಮಕ್ಕಳು ಜಾಗೃತ ರಾಗಬೇಕು : ನ್ಯಾಯಾಧೀಶ ಶಿವಣ್ಣ
ಪುತ್ತೂರು: ಮಕ್ಕಳಲ್ಲಿ ತಂಬಾಕುವಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಬೇಕು. ಆಗ ಆರೋಗ್ಯವಂತ ಸಮಾಜ ನಿರ್ಮಾಣ ಆಗುತ್ತದೆ ಎಂದು ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ ಹೆಚ್ ಆರ್ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗು ವಕೀಲರ ಸಂಘ ಪುತ್ತೂರು ಇವತ ಸಂಯುಕ್ತ ಆಶ್ರಯದಲ್ಲಿ ಎಚ್‌ಪಿಆರ್ ಇನ್ಸ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆಂಡ್ ಪ್ಯಾರಮೆಡಿಕಲ್ ಸೈನ್ಸ್ ಪುತ್ತೂರು ಮತ್ತು ಅಸಹಾಯಕರ ಸೇವಾ ಟ್ರಸ್ಟ್ ಪುತ್ತೂರು ಇದರ ಸಹಕಾರದೊಂದಿಗೆ ವಿಶ್ವ ತಂಬಾಕು ನಿಷೇಧ ದಿನಾಚರಣೆಯ ಅಂಗವಾಗಿ ಬರೆಕೆರೆ ವೆಂಕಟ್ರಮಣ ಕಟ್ಟಡದಲ್ಲಿರುವ ಪ್ಯಾರಾಮೆಡಿಕಲ್ ಸಂಸ್ಥೆಯಲ್ಲಿ ಮೇ 31ರಂದು ನಡೆದ ಕನೂನು ಮಾಹಿತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅಸಹಾಯಕರ ಸೇವಾ ಟ್ರಸ್ಟ್‌ನ ವಿಶ್ವಸ್ಥರಾಗಿರುವ ನ್ಯಾಯವಾದಿ ಮಹೇಶ್ ಕಜೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ತಂಬಾಕುವಿನಿಂದಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಬಹಳಷ್ಟು ಮಂದಿಯಲ್ಲಿ ಇವತ್ತು ಸ್ಟೈಲ್, ಫ್ಯಾಶನ್‌ಗೆ ಮನಸೋತು ದುಷ್ಟಟಗಳಿಗೆ ಒಳಗಾಗಿದ್ದಾರೆ. ಇದನ್ನು ತಡೆಯಲು ಚಟಗಳ ಜ್ಞಾನ ಅರಿವು ಅಗತ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಷ್ಟಟಗಳಿಗೆ ವಿದ್ಯಾರ್ಥಿಗಳು ಬಲಿಯಾಗದಿರಿ. ಜಾಗೃತರಾಗಿರಿ ಎಂದರು. ಎಚ್‌ಪಿಆರ್ ಇನ್ಸ್‌ಸ್ಟಿಟ್ಯೂಟ್‌ನ ಟ್ರಸ್ಟಿ ಶಿವಪ್ರಸಾದ್, ವಕೀಲರ ಸಂಘದ ಖಜಾಂಚಿ ಮಹೇಶ್ ಕೆ ಸವಣೂರು, ಜೊತೆ ಕಾರ್ಯದರ್ಶಿ ಮಮತಾ ಸುವರ್ಣ, ಪ್ರೊ. ಜಲಜಾ ಎಸ್.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರೊ. ತ್ರಿವೇಣಿ ಸ್ವಾಗತಿಸಿ, ಅನಿತಾ ವಂದಿಸಿರು. ಪ್ಯಾರಾಲೀಗಲ್ ವಾಲೆಂಟಿಯರ್ ಆಗಿರುವ ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಯನಾ ರೈ ಕಾರ್ಯಕ್ರಮ ನಿರೂಪಿಸಿದರು.