Published
7 months agoon
By
Akkare News
ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಷತ್ ಚುನಾವಣೆಗೆ ಪುತ್ತೂರು ತಾ.ಪಂ ಕಟ್ಟಡ ಹಾಗೂ ತಾಲೂಕು ಆಡಳಿತ ಸೌಧದಲ್ಲಿ ತೆರೆಯಲಾಗಿರುವ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗಳು ನಡೆಯಲಿದೆ. ಈ ಹಿನ್ನೆಯಲ್ಲಿ ಮತದಾನ ಪ್ರಕ್ರಿಯೆಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜೂ.3ರ ಸೋಮವಾರದ ಸಂತೆಯನ್ನು ರದ್ದು ಪಡಿಸಲಾಗಿದ್ದು ಕಿಲ್ಲೆ ಮೈದಾನ ಹಾಗೂ ಸುತ್ತ ಮುತ್ತಲ ರಸ್ತೆ ಬದಿಯಲ್ಲಿ ಸಂತೆ ವ್ಯಾಪಾರವನ್ನು ನಿಷೇಧಿಸಿ ಪೌರಾಯುಕ್ತ ಬದ್ರುದ್ದೀನ್ ಸೌದಾಗರ ಆದೇಶಿಸಿದ್ದಾರೆ.