Published
7 months agoon
By
Akkare Newsಆದ್ರೆ ಈ ಬಾರಿ ಈ ಎರಡೂ ಕ್ಷೇತ್ರದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದಂತೆ ಕಂಡು ಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಎಲ್ಲರ ವಿಶ್ವಾಸಗಳಿಸಿದ ಪದ್ಮರಾಜ್ ರಾಮಯ್ಯ ಅವರ ಗೆಲುವಿಗೆ ನಾಯಕರಿಂದ ಹಿಡಿದು ಕಾರ್ಯಕರ್ತರು ಒಗ್ಗಟ್ಟಾಗಿ ದುಡಿದಿದ್ದಾರೆ. ಪ್ರಚಾರದ ವಿಚಾರದಲ್ಲೂ ಮುಂದಿದ್ದ ಪದ್ಮರಾಜ್ ರಾಮಯ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಸೃಷ್ಟಿ ಮಾಡಿದ್ದರು. ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡ್ರೆ ಈ ಬಾರಿ ಪದ್ಮರಾಜ್ ರಾಮಯ್ಯ ಗೆಲ್ಲುವ ಅಭ್ಯರ್ಥಿಯಾಗಿ ಕಂಡು ಬರ್ತಾರೆ. ಹಾಗಂತ ಗೆಲುವು ಅಷ್ಟೊಂದು ಸಲೀಸಲ್ಲ ಅನ್ನೋದು ಕೂಡಾ ವಾಸ್ತವ. ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಕೈ ತಪ್ಪಿರುವುದು ಕೆಲ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು ಅನ್ನೋದು ಬಿಟ್ರೆ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟಾ ಅವರಿಗೆ ಹಿನ್ನಡೆಯಾಗುವ ಯಾವ ಅಂಶವೂ ಕಂಡು ಬಂದಿಲ್ಲ. ಇನ್ನು ಒಂದಷ್ಟು ಜಾತಿ ಲೆಕ್ಕಾಚಾರದಲ್ಲಿ ಮತಗಳು ಆಚೆ ಈಚೆ ಆಗಬಹುದಾದ್ರೂ ಅದು ಎಷ್ಟರ ಮಟ್ಟಿಗೆ ರಿಸಲ್ಟ್ ಮೇಲೆ ಪ್ರಭಾವ ಬೀರಬಹುದು ಅನ್ನೋದು ಕೂಡಾ ಊಹಿಸಲು ಸಾದ್ಯವಿಲ್ಲ. ಇನ್ನು ನೋಟಾ ಕಮಾಲ್ ಮಾಡುತ್ತದೆಯಾ ಅನ್ನೋ ಪ್ರಶ್ನೆ ಕೂಡಾ ಇದೆ. ಹೀಗಾಗಿ ಈ ಎಲ್ಲಾ ಕುತೂಹಲಕ್ಕೆ ಇಂದು ನಡೆಯುವ ಮತ ಎಣಿಕೆಯಂದಷ್ಟೇ ಉತ್ತರ ಸಿಗಲಿದೆ.
ಇನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕೂಡಾ ಸಾಕಷ್ಟು ಕದನ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯೇ ಇಲ್ಲ ಅನ್ನೋ ಹೊತ್ತಿಗೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರ ವ್ಯಯಕ್ತಿಕ ವರ್ಚಸ್ಸು, ಅಧಿಕಾರ ಇಲ್ಲದೇ ಇದ್ದಾಗಲೂ ಜನರೊಂದಿಗೆ ಅವರಿಟ್ಟಿದ್ದ ಒಡನಾಟ ಅವರಿಗೆ ಪ್ಲಸ್ ಆಗಬಹುದು ಅನ್ನೋ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಇದೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಮತದಾರ ಕಳೆದ ವಿಧಾನಸಭಾ ಚುನಾವಣಯಲ್ಲಿ ಬಿಜೆಪಿ ಬಿಟ್ಟು ಕೈಗೆ ಜೈ ಅಂದಿದ್ದು ಇಲ್ಲಿ ಇಂಪ್ಯಾಕ್ಟ್ ಆಗುವ ಲಕ್ಷಣ ಇದೆ. ಮತ್ತೊಂದು ಕಡೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೇಟ್ ನೀಡಿದ ವಿಚಾರವಾಗಿ ಪಕ್ಷದಲ್ಲಿ ಅಸಮಾಧಾನ ಇತ್ತು ಅನ್ನೋ ಮಾತುಗಳಿದ್ದು ಅದರ ಎಫೆಕ್ಟ್ ಮತದಾನದಲ್ಲಿ ಆಗಿರುವ ಸಾಧ್ಯತೆ ಇದೆ. ಈ ಎಲ್ಲಾ ಅಂತೆ ಕಂತೆಗಳ ಲೆಕ್ಕಾಚಾರಕ್ಕೆ ಇಂದು ತೆರೆ ಬೀಳಲಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಜನರು ಯಾರನ್ನ ಒಪ್ಪಿಕೊಂಡು ದೆಹಲಿಗೆ ಕಳುಹಿಸ್ತಾರೆ ಅನ್ನೋ ವಿಚಾರ ಗೊತ್ತಾಗಲಿದೆ.