ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಎನ್‌ಡಿಎ ಸರ್ಕಾರಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಮಂಗಳವಾರ ಷೇರುಪೇಟೆಯಲ್ಲಿ ಭಾರೀ ಕುಸಿತ ದಾಖಲಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 4390 ಪಾಯಿಂಟ್ಸ್ ಕುಸಿದು 72079ರ ಮಟ್ಟದಲ್ಲಿ ಮುಚ್ಚಿದೆ. ನಿಫ್ಟಿ 1379 ಅಂಕ ಕುಸಿದು 21884ರ ಮಟ್ಟದಲ್ಲಿ ಮುಕ್ತಾಯಗೊಂಡಿದೆ. ಮೋದಿ ಷೇರುಗಳು ಹೆಚ್ಚು ನಷ್ಟ ಹೊಂದಿದ್ದು, ಷೇರು ಮಾರುಕಟ್ಟೆ ಕುಸಿತಕ್ಕೆ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಎನ್‌ಡಿಎ ಸರ್ಕಾರಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಮಂಗಳವಾರ ಷೇರುಪೇಟೆಯಲ್ಲಿ ಭಾರೀ ಕುಸಿತ ದಾಖಲಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 4390 ಪಾಯಿಂಟ್ಸ್ ಕುಸಿದು 72079ರ ಮಟ್ಟದಲ್ಲಿ ಮುಚ್ಚಿದೆ. ನಿಫ್ಟಿ 1379 ಅಂಕ ಕುಸಿದು 21884ರ ಮಟ್ಟದಲ್ಲಿ ಮುಕ್ತಾಯಗೊಂಡಿದೆ. ಮೋದಿ ಷೇರುಗಳು ಹೆಚ್ಚು ನಷ್ಟ ಹೊಂದಿದ್ದು, ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ.
ಇದಲ್ಲದೆ ಗೌತಮ್ ಅದಾನಿ ಗ್ರೂಪ್ ಕಂಪನಿಗಳ ಷೇರುಗಳಲ್ಲಿ ಶೇ.21ರಷ್ಟು ಇಳಿಕೆ ದಾಖಲಾಗಿದೆ. ಮಂಗಳವಾರ, ಸ್ಟಾಕ್ ಮಾರುಕಟ್ಟೆಯ ದುರ್ಬಲ ವಹಿವಾಟಿನ ಕಾರಣ, ಬ್ಯಾಂಕ್ ನಿಫ್ಟಿ ಸೂಚ್ಯಂಕವು ಸುಮಾರು ಶೇ.8 ರಷ್ಟು ಕುಸಿದಿದೆ. ಆದರೆ, ನಿಫ್ಟಿ ಮಿಡ್‌ಕ್ಯಾಪ್-100 ಕೂಡ ಸುಮಾರು ಶೇ.8ರಷ್ಟು ಕುಸಿತ ಕಂಡಿದೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇ.7ರಷ್ಟು ಕುಸಿತದೊಂದಿಗೆ ಮುಕ್ತಾಯವಾಯಿತು.