ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶಾಲಾ ಚಟುವಟಿಕೆ

ನೀಟ್ 2024 : ಪುತ್ತೂರು ತಾಲೂಕಿನಲ್ಲಿಯೇ 600ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಏಕೈಕ ವಿದ್ಯಾ ಸಂಸ್ಥೆಅಂಬಿಕಾ ವಿದ್ಯಾಲಯ

Published

on

ಪುತ್ತೂರು: ವೈದ್ಯಕೀಯ ವೃತ್ತಿ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ನೀಟ್-2024 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ. 6 ವಿದ್ಯಾರ್ಥಿಗಳು 600ಕ್ಕಿಂತಲೂ ಅಧಿಕ ಅಂಕ, 16 ವಿದ್ಯಾರ್ಥಿಗಳು 500ಕ್ಕಿಂತಲೂ ಅಧಿಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.


ಪುತ್ತೂರು ಚಿಕ್ಕಮುಡ್ನೂರಿನ ಗ್ರೆಗರಿ ರೋನಿ ಪಾಯ್ಸ್ ಮತ್ತು ಮಾಬೆಲ್ ರೋಡ್ರಿಗಸ್ ದಂಪತಿಯ ಪುತ್ರಿ ಅನುಷಾ ಜೇನ್ ಪಾಯ್ಸ್ (642 ಅಂಕ), ಪೆರಮೊಗರಿನ ಕೆ ವಿ ತಿರುಮಲೇಶ್ವರ ಭಟ್ ಮತ್ತು ಕೆ ಟಿ ಆಶಾ ದಂಪತಿಯ ಪುತ್ರ ಅಭಿರಾಮ್ ಕೆ.ಟಿ (625 ಅಂಕ),ಸುಳ್ಯದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ ಅಭಿಶ್ರೀ ಎ (619 ಅಂಕ), ಕಡಬ ಕುಟ್ರುಪಾಡಿಯ ಚಂದ್ರಶೇಖರ ರೈ ಮತ್ತು ದಯಾವತಿ ದಂಪತಿಯ ಪುತ್ರಿ ಭಾಗ್ಯಶ್ರೀ ರೈ (619 ಅಂಕ), ಪುತ್ತೂರು ಕೆದಂಬಾಡಿಯ ಸತೀಶ್ ನಾಯಕ್ ಪಿ ಮತ್ತು ಲಾವಣ್ಯ ಎಂ ಬಿ ದಂಪತಿಯ ಪುತ್ರಿ ಶೃಂಗಾ  ನಾಯಕ್ ಪಿ (616 ಅಂಕ), ಪುತ್ತೂರು ಸಂಪ್ಯದ ಪ್ರಸನ್ನ ಕುಮಾರ್ ರೈ ಮತ್ತು ಜ್ಯೋತಿ ಪಿ ರೈ ದಂಪತಿಯ ಪುತ್ರಿ ಹರ್ಷಿತಾ.ರೈ (615 ಅಂಕ), ಸುಳ್ಯದ ರಾಮಚಂದ್ರ ರಾವ್ ಮತ್ತು ಅನಸೂಯ ರಾವ್ ದಂಪತಿಯ ಪುತ್ರಿ ಶ್ವೇತಾ ಐ ಕೆ (585 ಅಂಕ), ಪುತ್ತೂರು ಪಡೀಲಿನ ಸಂಜಿತ್ ಕುಮಾರ್ ಮತ್ತು ಕುಮಾರಿ ಬೆನಿಟಾ ಸಿನ್ಹ ದಂಪತಿಯ ಪುತ್ರಿ ಪ್ರಿಯಾ (579 ಅಂಕ), ಪುತ್ತೂರು ಬಲ್ನಾಡಿನ ರವಿಕೃಷ್ಣ ಡಿ ಮತ್ತು ಅನುಪಮಾ ದಂಪತಿಯ ಪುತ್ರ ಮಯೂರ್ ಡಿ ಆರ್ (564 ಅಂಕ), ಬಂಟ್ವಾಳ ಅಡ್ಯನಡ್ಕದ ವಿಶ್ವನಾಥ ಎಂ ಮತ್ತು ರಮ್ಯಾ ಎಂ ದಂಪತಿಯ ಪುತ್ರ ವರುಣ್ ಎಂ (564 ಅಂಕ), ಸುಳ್ಯ ಕನಕಮಜಲಿನ ಚಿನ್ನಪ್ಪ ಕುತ್ತಿಮುಂಡ ಮತ್ತು ರಾಧಾ ದಂಪತಿಯ ಪುತ್ರಿ ಆಶಿತಾ ಕೆ ಸಿ (562 ಅಂಕ),ಪುತ್ತೂರಿನ ರವಿಚಂದ್ರ ಎಸ್ ಮತ್ತು ಶ್ವೇತಾ ಎಮ್ ಆರ್ ದಂಪತಿಯ ಪುತ್ರಿ ರಾಶಿ ಆರ್ ಎಸ್ (558 ಅಂಕ), ಕಾಣಿಯೂರಿನ ನಿರಂಜನ ಕೆ ಎನ್ ಮತ್ತು ಸ್ವರ್ಣಲತಾ ಎನ್ ಆಚಾರ್ಯ ದಂಪತಿಯ ಪುತ್ರ ನಿಧಿ ಎನ್ ಆಚಾರ್ಯ (544 ಅಂಕ), ಸುಳ್ಯ ಮಣಿಕ್ಕರದ ಪದ್ಮನಾಭ ಕೆ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರಿ ಚಂದನಲಕ್ಷ್ಮಿ ಪಿ ಎನ್ (540 ಅಂಕ), ಮೀಂಜ ಮೀಯಪದವಿನ ಗೋಪಾಲಕೃಷ್ಣ ಭಟ್ ಮತ್ತು ವಿದ್ಯಾಲಕ್ಷ್ಮಿ ಕೊಮ್ಮೆ ದಂಪತಿಯ ಪುತ್ರಿ ಸುಮನಾ (528 ಅಂಕ), ಪುತ್ತೂರು ಪಾಣಾಜೆಯ ಶಿವಶಂಕರ ಭಟ್ ಸಿ ಎಚ್ ಮತ್ತು ದೀಪಾ ದಂಪತಿಯ ಪುತ್ರಿ ಶ್ರಾವ್ಯಲಕ್ಷ್ಮಿ ಕೆ (510 ಅಂಕ) ಉತ್ತಮ ಅಂಕಗಳನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Continue Reading
Click to comment

Leave a Reply

Your email address will not be published. Required fields are marked *

Advertisement