Published
7 months agoon
By
Akkare Newsಹೊಸದಿಲ್ಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆನ್ನಲಾದ ಸಿಐಎಸ್‌ಎಫ್‌ನ ಮಹಿಳಾ ಅಧಿಕಾರಿ ಸೇವೆಯಿಂದ ಅಮಾನತುಗೊಂಡಿದ್ದರೆ, ಸಂಗೀತ ನಿರ್ದೇಶಕ ಮತ್ತು ಗಾಯಕ ವಿಶಾಲ್ ದದ್ಲಾನಿ ಪೋಸ್ಟ್ ಮಾಡಿ, ಆರೋಪಿತೆ ಸಿಐಎಸ್‌ಎಫ್ ಅಧಿಕಾರಿ ಕುಲ್ವಿಂದ್ ಕೌರ್ ವಿರುದ್ಧ ಕ್ರಮಕೈಗೊಂಡರೆ ತಾವು ಆಕೆಗೆ ತಾನು ಉದ್ಯೋಗ ನೀಡುವುದಾಗಿ ಹೇಳಿದ್ದಾರೆ.
“ನಾನು ಯಾವತ್ತೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ಈ ಅಧಿಕಾರಿಯ ಆಕ್ರೋಶವನ್ನು ಖಂಡಿತಾ ಅರ್ಥಮಾಡಿಕೊಳ್ಳಬಲ್ಲೆ. ಸಿಐಎಸ್‌ಎಫ್ ಆಕೆಯ ವಿರುದ್ಧ ಯಾವುದೇ ಕ್ರಮಕೈಗೊಂಡರೆ ಆಕೆ ಸ್ವೀಕರಿಸಲು ಸಿದ್ಧವಿದ್ದರೆ ಆಕೆಗಾಗಿ ಒಂದು ಉದ್ಯೋಗ ಕಾಯುತ್ತಿದೆ ಎಂಬುದನ್ನು ನಾನು ಖಾತರಿಪಡಿಸುತ್ತೇನೆ, ಜೈ ಹಿಂದ್, ಜೈ ಜವಾನ್, ಜೈ ಕಿಸಾನ್,” ಎಂದು ಬರೆದಿದ್ದಾರೆ.
ಕಂಗನಾಗೆ ಕಪಾಳಮೋಕ್ಷಗೈದ ವಿಚಾರ ಭಾರೀ ಸುದ್ದಿಯಾಗಿದ್ದರೂ ಬಾಲಿವುಡ್ ಈ ಕುರಿತ ತನ್ನ ನಿಲುವು ತಿಳಿಸಿಲ್ಲ ಎಂದು ಕಂಗನಾ ತಮ್ಮ ಅಸಮಾಧಾನ ಈ ಹಿಂದೆ ವ್ಯಕ್ತಪಡಿಸಿದ್ದರು.