ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಲಕ್ಷದ್ವೀಪಕ್ಕೆ ಮೋದಿ ಭೇಟಿ ಕೊಟ್ಟರೂ NDA ಅಭ್ಯರ್ಥಿ ಗಳಿಸಿದ್ದು ಬರೀ 201 ಮತ!

Published

on

ಲಕ್ಷದ್ವೀಪ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಹೀನಾಯವಾಗಿ ಸೋಲನ್ನು ಕಂಡಿದ್ದು, ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಕಂಡು ಬರುತ್ತಿದೆ.

ಮುಸ್ಲಿಂ ಮತದಾರರೇ ನಿರ್ಣಾಯಕವಾಗಿರುವ ಲಕ್ಷದ್ವೀಪ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ವಿದ್ವಾಂಸರನ್ನು ಕಣಕ್ಕಿಳಿಸಿದ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಮತಬ್ಯಾಂಕ್‌ಗಳನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದರು, ಆದರೆ ಎನ್‌ಡಿಎ ಅಭ್ಯರ್ಥಿ ಕೇವಲ 201 ಮತಗಳನ್ನು ಪಡೆಯುವ ಮೂಲಕ ಲಕ್ಷದ್ವೀಪ ದ್ವೀಪಸಮೂಹದಲ್ಲಿ ಎನ್‌ಡಿಎಗೆ ಮುಖಭಂಗವಾಗಿದೆ.

ಲಕ್ಷದ್ವೀಪದಲ್ಲಿ 2019ರಲ್ಲಿ ಬಿಜೆಪಿ ಅಭ್ಯರ್ಥಿ 125 ಮತಗಳಿಸಿದ್ದರು. ಆದರೆ ಈ ಬಾರಿ ಕುದ್ದು ಪ್ರಧಾನಿ ಭೇಟಿ ನೀಡಿದ್ದರಿಂದ ಎನ್‌ಡಿಎ ಅಭ್ಯರ್ಥಿಗೆ ಹೆಚ್ಚಿನ ಮತ ಸಿಗುವ ಭರವಸೆ ಬಿಜೆಪಿ ಪಾಲಯದಲ್ಲಿತ್ತು. ಆದರೆ ಇದು ಸುಳ್ಳಾಗಿದೆ.

ಹಾಲಿ ಸಂಸದ ಎನ್‌ಸಿಪಿ (ಎಸ್‌ಪಿ)ಯ ಮೊಹಮ್ಮದ್ ಫೈಜಲ್ ವಿರುದ್ಧ 2,647 ಮತಗಳ ಮುನ್ನಡೆಯೊಂದಿಗೆ ಕಾಂಗ್ರೆಸ್‌ನ ಮಾಜಿ ಸಂಸದ ಮುಹಮ್ಮದ್ ಹಮ್ದುಲ್ಲಾ ಸಯೀದ್ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಸುಮಾರು 49,000 ಮತದಾರರನ್ನು ಹೊಂದಿರುವ ದ್ವೀಪಸಮೂಹದಲ್ಲಿ ಎನ್‌ಡಿಎ ಅಭ್ಯರ್ಥಿ ಎನ್‌ಸಿಪಿ(ಎಪಿ)ಯ ಯೂಸುಫ್ ಟಿ ಪಿ 201 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

 
ಬಳಿಕ ಕಾಪು ಸೂರಿ ಶೆಟ್ಟಿ ನೇತೃತ್ವದಲ್ಲಿ ಮೃತದೇಹವನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ತಿಳಿದು ಬಂದಿದೆ.

ಲಕ್ಷದ್ವೀಪದಲ್ಲಿ ಲೆಪ್ಟಿನೆಂಟ್‌ ಗವರ್ನರ್‌ ಪ್ರಫುಲ್ ಖೋಡಾ ಪಟೇಲ್ ತಂದಿದ್ದ ಆಡಳಿತದ ಸುಧಾರಣೆಗಳ ವಿರುದ್ಧ ಪ್ರತಿಭಟನೆ ನಡೆದಿತ್ತು. 2021ರಲ್ಲಿ ‘ಲಕ್ಷದ್ವೀಪ ಉಳಿಸಿ’ ಅಭಿಯಾನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನೂತನ ಸುಧಾರಣೆಗಳು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಜನರು ಭಯಪಟ್ಟಿದ್ದರು ಮತ್ತು ದ್ವೀಪಸಮೂಹವನ್ನು ಕೇಸರಿಮಯಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಜನವರಿಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ  ಜನರೊಂದಿಗೆ ಸಂವಹನ ನಡೆಸಿದ್ದರು. ಲಕ್ಷದ್ವೀಪದ ಮುಸ್ಲಿಂ ಮಹಿಳೆಯರೊಂದಿಗೆ ಮೋದಿ ಸಂವಾದ ನಡೆಸಿದ ವಿಡಿಯೋ ತುಣುಕನ್ನು ಬಿಜೆಪಿ ಪಾಳಯಗಳು ವ್ಯಾಪಕವಾಗಿ ವೈರಲ್‌ ಮಾಡಿದ್ದವು.

 

ಎನ್‌ಸಿಪಿಯ ವಿಭಜನೆ ಮತ್ತು ಎನ್‌ಸಿಪಿ(ಎಪಿ) ಬಣ ಎನ್‌ಡಿಎಗೆ ಸೇರ್ಪಡೆಗೊಂಡ ನಂತರ, ಲಕ್ಷದ್ವೀಪ ಸ್ಥಾನವನ್ನು ಎನ್‌ಸಿಪಿ (ಎಪಿ) ಬಣಕ್ಕೆ ನೀಡಲಾಯಿತು. ಪಕ್ಷವು ಮುಸ್ಲಿಂ ವಿದ್ವಾಂಸ ಯೂಸುಫ್ ಟಿ ಪಿ ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿತ್ತು. ಆದರೆ ಈ ಪ್ರಯತ್ನಗಳು ಮುಸ್ಲಿಂ ಮತದಾರರನ್ನು ಎನ್‌ಡಿಎಗೆ ಸೆಳೆಯಲು ಸಹಾಯ ಮಾಡಲಿಲ್ಲ.

ಲಕ್ಷದ್ವೀಪವು ಎನ್‌ಸಿಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತದೆ. ಈ ಬಾರಿ ಗೆದ್ದಿರುವ ಮುಹಮ್ಮದ್ ಹಮ್ದುಲ್ಲಾ ಸಯೀದ್ ಅವರು ಲಕ್ಷದ್ವೀಪದಲ್ಲಿ ಸುದೀರ್ಘ ಅವಧಿಯ ಸಂಸದರಾಗಿರುವ ಕಾಂಗ್ರೆಸ್ ನಾಯಕ ಪಿ ಎಂ ಸಯೀದ್ ಅವರ ಪುತ್ರರಾಗಿದ್ದಾರೆ. ಪಿ ಎಂ ಸಯೀದ್ 2004ರ ಚುನಾವಣೆಯಲ್ಲಿ ಸೋತಿದ್ದರು ಮತ್ತು 2005ರಲ್ಲಿ ನಿಧನರಾಗಿದ್ದಾರೆ. 2009ರ ಚುನಾವಣೆಯಲ್ಲಿ ಅವರ ಮಗ ಸ್ಥಾನವನ್ನು ಗೆದ್ದರು. ಆದರೆ 2014 ಮತ್ತು 2019ರ ಚುನಾವಣೆಯಲ್ಲಿ ಎನ್‌ಸಿಪಿಯ ಮೊಹಮ್ಮದ್ ಫೈಜಲ್ ಈ ಸ್ಥಾನವನ್ನು ಗೆದ್ದುಕೊಂಡಿದ್ದರು. ಕಳೆದ ವರ್ಷ ಕೊಲೆ ಯತ್ನ ಪ್ರಕರಣದಲ್ಲಿ ಫೈಝಲ್ ಅವರನ್ನು ಅನರ್ಹಗೊಳಿಸಿದ್ದರಿಂದ ಸುದ್ದಿಯಾಗಿದ್ದರು. ಆದರೆ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿದ ನಂತರ ಅವರ ಅಮಾನತು ರದ್ದುಗೊಳಿಸಲಾಗಿತ್ತು.

Continue Reading
Click to comment

Leave a Reply

Your email address will not be published. Required fields are marked *

Advertisement