ನಮ್ಮೊಂದಿಗೆ ಸಂಪರ್ಕ ಸಾಧಿಸಿ

ನಿಧನ

ಮಾಧ್ಯಮ ರಂಗದ ಭೀಷ್ಮ ರಾಮೋಜಿ ರಾವ್ ಇನ್ನಿಲ್ಲ: ಈಟಿವಿ ನೆಟ್‌ವರ್ಕ್‌ ಸಂಸ್ಥಾಪಕ ಇನ್ನು ನೆನಪು ಮಾತ್ರ..

Published

on

ರಾಮೋಜಿ ಫಿಲ್ಮ್‌ ಸಿಟಿ ಯಾರಿಗೆ ತಾನೇ ಗೊತ್ತಿಲ್ಲ.. ಈಟಿವಿ ನ್ಯೂಸ್ ನೆಟ್‌ವರ್ಕ್‌ ಬಗ್ಗೆ ಕೇಳದವರೇ ಇಲ್ಲ.. ಇಂಥಾ ದಿಗ್ಗಜ ಸಂಸ್ಥೆಗಳನ್ನ ಕಟ್ಟಿ ಬೆಳೆಸಿದ ಸಾಧಕ ರಾಮೋಜಿ ರಾವ್.. ರೈತ ಕುಟುಂಬದಲ್ಲಿ ಜನಿಸಿದ ಈ ಸಾಧಕ ಬೆಳೆದು ಬಂದ ಹಾದಿಯೇ ರೋಚಕ.. ಇದೀಗ ಕಾಲನ ಕರೆಗೆ ಓಗೊಟ್ಟಿರುವ ರಾಮೋಜಿ ರಾವ್, ತಮ್ಮ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ರಾಮೋಜಿ ಫಿಲ್ಮ್‌ ಸಿಟಿಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಹೈಲೈಟ್ಸ್‌:

  • ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್‌ ವರ್ಕ್‌ ಸಂಸ್ಥಾಪಕರಾದ ರಾಮೋಜಿ ರಾವ್
  • ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್ ಸಂಸ್ಥೆಗಳನ್ನೂ ಕಟ್ಟಿದ್ದರು
  • ವಿಶ್ವ ವಿಖ್ಯಾತ ರಾಮೋಜಿ ಫಿಲ್ಮ್‌ ಸಿಟಿಯನ್ನು ಕಟ್ಟಿದ ಸಾಧಕ ರಾಮೋಜಿ ರಾವ್

ಹೈದರಾಬಾದ್: ಮಾಧ್ಯಮ ರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್ ಅವರು ಇಹಲೋಕ ತ್ಯಜಿಸಿದ್ದಾರೆ. ಜೂನ್ 8 ಶನಿವಾರ ಬೆಳಗ್ಗೆ 4.50ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ರಾಮೋಜಿ ರಾವ್ ಅವರಿಗೆ 87 ವರ್ಷ ವಯಸ್ಸಾಗಿತ್ತು.ರಾಮೋಜಿ ರಾವ್ ಅವರನ್ನು ಜೂನ್ 5 ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೈದರಾಬಾದ್‌ನ ನಾನಾಕರಮ್‌ಗುಡದಲ್ಲಿ ಇರುವ ಸ್ಟಾರ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವಯೋ ಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement