ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಕಲ್ಲಡ್ಕ ಬೃಹತ್ ಉಚಿತ ದಂತ ಹಾಗೂ ವೈದ್ಯಕೀಯ ಶಿಬಿರ

Published

on

ಕಲ್ಲಡ್ಕ ಜೂನ್ 9,. ಬಂಟ್ವಾಳ ತಾಲೂಕಿನ ಶ್ರೀ ಮಂತ್ರ ದೇವತಾ ಜನ ಸೇವಾ ಟ್ರಸ್ಟ್ ಕಟ್ಟೆಮಾರ್ ಹಾಗೂ ಅಖಿಲ ಕರ್ನಾಟಕ ರಾಜ್ಯ ಕೇಸರಿ ಟ್ರಸ್ಟ್( ರಿ) ದ. ಕ ಬೆಳ್ತಂಗಡಿ ತಾಲೂಕು ಇದರ ಜಂಟಿ ಆಶ್ರಯದಲ್ಲಿ. ದಕ್ಷಿಣ ಕನ್ನಡ ಜಿಲ್ಲಾ ವೈದ್ಯಕೀಯ ಪ್ರಕೋಸ್ಟ ಇದರ ಸಯೋಗದೊಂದಿಗೆ,. ಕೆ ವಿ ಜಿ ದಂತ ಮಹಾ ವಿದ್ಯಾಲಯ ಸುಳ್ಯ. ಯನೇಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವುಗಳ ನೇತೃತ್ವದಲ್ಲಿ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರ್ ನ ಧರ್ಮದರ್ಶಿ ಶ್ರೀ ಮನೋಜ್ ಕಟ್ಟೆಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಉಚಿತ ದಂತ ಹಾಗೂ ವೈದ್ಯಕೀಯ ಶಿಬಿರ ಶ್ರೀ ಮಂತ್ರ ದೇವತಾ ಸಾನಿಧ್ಯ ಕಟ್ಟೆಮಾರು ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪುಂಜೋಳಿ ಮಾರುಗುತ್ತು ಮೋಹನ್ ರಾಜ್ ಚೌಟ ಉದ್ಘಾಟಿಸಿ ಇಂತಹ ಕಾರ್ಯಗಳು ಪುಣ್ಯ ನೀಡುವಂತ ಕಾರ್ಯ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ ವಿ ಜಿ ಡೆಂಟಲ್ ಮಹಾವಿದ್ಯಾಲಯ ಸುಳ್ಯ ಇದರ ವಿಭಾಗ ಮುಖ್ಯಸ್ಥರು ಪ್ರಾಧ್ಯಾಪಕರು ಆದ ಡಾಕ್ಟರ್ ಎಂ ಎಂ ದಯಾಕರ್ ಮಾತಾಡಿ ಇನ್ನೊಬ್ಬರ ಮನೆ ಬೆಳಗಬೇಕು ಎನ್ನುವ ದೃಷ್ಟಿಯಿಂದ ಶ್ರೀ ಮಂತ್ರ ದೇವತಾ ಜನಸೇವಾ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ರಾಜಕೇಶ್ವರಿ ಟ್ರಸ್ಟ್ (ರೀ )ದಕ್ಷಿಣ ಕನ್ನಡ ಬೆಳ್ತಂಗಡಿ ಇವರು ಮಾಡುವಂತ ಈ ಕಾರ್ಯ ಅಭಿನಂದನದಾಯಕವಾಗಿದೆ. ಈಗಿನ ಸಮುದಾಯ ವಿಷಯುಕ್ತ ಆಹಾರ ಸೇವಿಸುವುದರಿಂದಲೇ ದಿನದಿಂದ ದಿನಕ್ಕೆ ರೋಗಿಗಳ ಪ್ರಮಾಣ ಜಾಸ್ತಿ ಆಗುತ್ತದೆ. ಆದುದರಿಂದ ನಾವು ಸೇವಿಸುವ ಆಹಾರದ ಕಡೆ ಗಮನ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನ ಅರ್ಜುನ್ ಭಂಡಾರ್ಕರ್ ಹಾಗೂ ಡಾಕ್ಟರ್ ಎಂ ಎಂ ದಯಾಕರ್ ಅವರನ್ನು ಶ್ರೀಮಂತ್ರ ದೇವತಾ ಸಾನಿಧ್ಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಹಾಗೂ ಬಡ ವಿದ್ಯಾರ್ಥಿಗೆ ಕಲಿಕೆಗೆ ಸಹಾಯಧನ ಹಾಗೂ ಒಬ್ಬರಿಗೆ ಅನಾರೋಗ್ಯ ನಿಮಿತ್ತ ಸಹಾಯಧನ ನೀಡಲಾಯಿತು, ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಖಿಲ ಕರ್ನಾಟಕ ರಾಜಕೇಶ್ವರಿ ತಂಡದ ಸದಸ್ಯ ಸಂದೇಶ್ ಅವರನ್ನು ಗೌರವಿಸಲಾಯಿತು.

 

ಕಾರ್ಯಕ್ರಮದ ವೇದಿಕೆಯಲ್ಲಿ ಯನೇಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇದರ ನಿರ್ದೇಶಕರಾದ ಡಾಕ್ಟರ್ ಅಶ್ವಿನಿ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ವೈದ್ಯಕೀಯ ಪ್ರಕೋಸ್ಟದ ಸಂಚಾಲಕರಾದ ಡಾಕ್ಟರ್ ಗಣೇಶ್ ಪ್ರಸಾದ್ ಮುದ್ರಾಜೆ, ಅಮ್ಮ್ಟೂರ್ ಕೃಷ್ಣಮಂದಿರದ ಅಧ್ಯಕ್ಷರಾದ ರಮೇಶ್ ಕೆ, ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ, ಬಂಟ್ವಾಳ ತಾಲೂಕ ಅಧ್ಯಕ್ಷ ಪ್ರಸಾದ್ ಕುಲಾಲ್, ಕೌಶಿಲ್ ಶೆಟ್ಟಿ ಬಾಳಿಕೆ , ಗಂಗಾಧರ ಟೈಲರ್ ಕೇಶವ ನಗರ, ವಿಕ್ಯಾತ್ ಶೆಟ್ಟಿ ಬಾಳಿಕೆ, ಸಂದೀಪ್ ಕುಪ್ಪೆಟ್ಟಿ, ಶೈಲೇಶ್ ಪೂಜಾರಿ ಕುರ್ಚಿಗುಡ್ಡೆ, ನಾಗೇಶ್ ಕುಲಾಲ್, ನವೀನ್ ಪೂಜಾರಿ ಕಾರಜೆ,, ಶೇಖರ ಶೆಟ್ಟಿ ಬಾಳಿಕೆ, ಚಂದ್ರಶೇಖರ್ ರೈ, ಚೆನ್ನಪ್ಪ ಆರ್ ಕೋಟ್ಯಾನ್ , ದಿನೇಶ್ ಅಮ್ಮ್ಟೂರ್ , ಮಧುಶ್ರೀ ಎಮ್ ಡಿ ಕಾಣಿಯೂರು ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸುಖೇಶ್ ಕೆ ಪಿ,. ಕಿಶೋರ್ ಕುಮಾರ್ ಕಟ್ಟೆಮಾರ್, ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಸಾಮಾನ್ಯ ರೋಗ ತಜ್ಞರು, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು , ಕಣ್ಣಿನ ರೋಗ ತಜ್ಞರು, ದಂತರೋಗ ತಜ್ಞರು ಭಾಗವಹಿಸಿದ್ದರು. ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ಇದರ ಸ್ಥಾಪಕ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ ಸ್ವಾಗತಿಸಿ, ಶ್ರೀ ಮಂತ್ರ ದೇವತಾ ಸಾನಿಧ್ಯ ಕಟ್ಟೆ ಮಾರ್ ಧರ್ಮದರ್ಶಿ ಮನೋಜ್ ಕುಮಾರ್ ವಂದಿಸಿ, ಕಿಶೋರ್ ಸುವರ್ಣ ಮುಂಡ್ಲಿ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement