ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಬಪ್ಪಳಿಗೆ ಮರ ಬಿದ್ದು 8 ವಿದ್ಯುತ್ ಕಂಬಗಳಿಗೆ ಹಾನಿ: ಸ್ಥಳಕ್ಕೆ ಶಾಸಕ ಭೇಟಿ: ಅಪಾಯಕಾರಿ‌ಮರಗಳ ತೆರವಿಗೆ ಸೂಚನೆ

Published

on

ಪುತ್ತೂರು: ಭಾನುವಾರ ಸಂಜೆ ಬಪ್ಪಳಿಗೆಯಲ್ಲಿ ರಸ್ತೆ ಬದಿಯ ಭಾರೀ ಗಾತ್ರದ ಮರವೊಂದು ಗಾಳಿಗೆ ಮುರಿದು ಬಿದ್ದು ಎಂಟು ವಿದ್ಯುತ್ ಕಂಬಗಳು ಮುರಿದಿದೆ.‌ ಭಾನುವಾರವಾಗಿದ್ದ ಕಾರಣ ವಾಹನಗ ಸಂಚಾರ ಕಡಿಮೆ ಇದ್ದು ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ‌ಮೆಸ್ಕಾಂ ಮತ್ತು ಅರಣ್ಯ ಅಧಿಕಾರಿಗಳನ್ನು ಕರೆಸಿದ ಶಾಸಕರು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು ಮತ್ತು ವಿದ್ಯುತ್ ಕಂಬಗಳನ್ನು ರಸ್ತೆ ಬದಿಯಲ್ಲೇ ಹಾಕದೆ ಸ್ವಲ್ಪ ದೂರದಲ್ಲಿ ಹಾಕುವಂತೆ ಸೂಚಿಸಿದರು.

ರಸ್ತೆ ಅಗಲೀಕರಣ ಮಾಡಿ ಸ್ಥಳೀಯರ ಮನವಿ
ಈ ರಸ್ತೆ ಅಗಲವಿಲ್ಲ, ಅಗಲೀಕರಣ ಮಾಡಬೇಕು,ದಿನಂಪ್ರತಿ‌ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತಿದೆ, ಮಳೆ ನೀರು ಹರಿದು ಹೋಗಲು ಚರಂಡಿಯೂ ಇಲ್ಲ. ಈ ಭಾಗದ ನಗರಸಭಾ ಸದಸ್ಯರು ಇಲ್ಲಿನ ಸಮಸ್ಯೆಯ ಬಗ್ಗೆ ಮಾತನಾಡುವುದೇ ಇಲ್ಲ,ಈ ಭಾಗಕ್ಕೆ ಬರುವುದೇ ಇಲ್ಲ ಎಂದು ಆರೋಪಿಸಿದರು. ರಸ್ತೆಯನ್ನು ಅಗಲೀಕರಣ ಮಾಡಿಸುವ ಬಗ್ಗೆ ಶಾಸಕರು‌ಭರವಸೆ ನೀಡಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement