Published
7 months agoon
By
Akkare Newsಬೆಂಗಳೂರು: ಕಳೆದೊಂದು ವರ್ಷದಲ್ಲಿ “ಶಕ್ತಿ’ ಯೋಜನೆಯಿಂದ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಹಿಳೆಯರ ಉದ್ಯೋಗ ಹೆಚ್ಚಳವಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದೆ. ಶ್ರಮಿಕ ವರ್ಗಗಳ ಸಂಬಂಧಗಳು ಗಟ್ಟಿಯಾಗಿವೆ. ಆದರೆ, ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಮಾತ್ರ ಹಾಗೇ ಇದೆ.
ಸರಕಾರದಿಂದ ಬಾರದ ಬಾಕಿ ಹಣ
ಯೋಜನೆಯಡಿ ಸರಕಾರದಿಂದ ಪ್ರಸಕ್ತ ಸಾಲಿನಲ್ಲಿ ಬರಬೇಕಾದ ಯಾವುದೇ ಬಾಕಿ ಇಲ್ಲ. ಆದರೆ ಕಳೆದ ವರ್ಷದ 950 ಕೋಟಿ ರೂ. ಇನ್ನೂ ಪಾವತಿ ಆಗಿಲ್ಲ. ಈ ಪೈಕಿ ಕೆಎಸ್‌ಆರ್‌ಟಿಸಿಯದ್ದು ಸಿಂಹಪಾಲು ಇದೆ. ಜತೆಗೆ ಕೆಎಸ್‌ಆರ್‌ಟಿಸಿಯ ಸಾವಿರ ಕೋಟಿ ರೂ. ಸಾಲವೂ ಇದೆ. ಈ ಮಧ್ಯೆ ಸರಕಾರವು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ “ಶಕ್ತಿ’ ಯೋಜನೆಗೆ ಸುಮಾರು ಐದು ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಆದರೆ ಉಳಿದ ಯಾವುದೇ ವೆಚ್ಚವನ್ನು ನಿಗಮವು ಸ್ವಂತ ಬಲದಿಂದಲೇ ನಿಭಾಯಿಸುವಂತೆ ಸೂಚಿಸಿದೆ.
ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಮುಂದಿರುವ ಗುರಿ ಬಸ್‌ಗಳ ಸಂಖ್ಯೆ ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನನುಕೂಲತೆ ತಪ್ಪಿಸುವುದು, ಗ್ರಾಮೀಣ ಭಾಗಗಳಿಗೆ ಇನ್ನಷ್ಟು ಉತ್ತಮ ಸೇವೆ ಕಲ್ಪಿಸುವುದಾಗಿದೆ. ನಿಯಮಿತವಾಗಿ ಸರಕಾರದಿಂದ ಯೋಜನೆ ಅಡಿ ಹಣ ಪಾವತಿ ಕೂಡ ಆಗುತ್ತಿದೆ. ಜತೆಗೆ ಈ ಯಶಸ್ಸಿಗೆ ಕಾರಣವಾದ ಸಿಬಂದಿಗೆ ಅಪಘಾತ ವಿಮೆ ಸೇರಿದಂತೆ ಇತರೆ ಸೌಲಭ್ಯಗಳನ್ನೂ ಹೆಚ್ಚಿಸಲಾಗಿದೆ.
– ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ