ಪುತ್ತೂರು: ವೀರಮಂಗಲ ಬಳಿ ಭಾನುವಾರ ಕಾಣಿಸಿಕೊಂಡ ಆನೆ ನಿನ್ನೆ ರಾತ್ರಿಯಿಂದ ಶಾಂತಿಗೋಡಿನಲ್ಲಿ ಪ್ರತ್ಯಕ್ಷವಾಗಿದೆ.ಸ್ಥಳೀಯ ಮೋಹನ ಕಂರ್ಬಡ್ಕ ಎಂಬವರ ಮನೆ ಗೇಟು ಮುರಿದು ತೋಟಕ್ಕೆ ಲಗ್ಗೆಯಿಟ್ಟಿದೆ. ಪರಿಣಾಮ ತೆಂಗಿನ ಮರಗಳಿಗೆ ಹಾನಿಯಾಗಿದೆ.
ಬಳಿಕ ಆನೆ ಶಾಂತಿಗೋಡು ಗೇರು ಸಂಶೋಧನಾ ನಿರ್ದೇಶನಾಲಯದ ಗೇರು ತೋಟಕ್ಕೆ ಲಗ್ಗೆಯಿಟ್ಟಿದೆ ಎನ್ನಲಾಗಿದೆ.