Published
6 months agoon
By
Akkare Newsಪುತ್ತೂರು: ನರಿಮೊಗರು ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ (40 ವ.) ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು.
ಸಂಜೆ ಮನೆಯಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರಾಗಿರುವ ಇವರು, ನರಿಮೊಗರು ವಲಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೂಸ್ಥಾನ್ ಕಾಂಪ್ಲೆಕ್ಸ್ ನಲ್ಲಿ ಹಲವು ವರ್ಷಗಳಿಂದ ಮೊಬೈಲ್ ಸೇಲ್ಸ್ ಸರ್ವೀಸ್ ಅಂಗಡಿಯನ್ನು ನಡೆಸುತ್ತಿದ್ದಾರೆ.
ಟ್ರೈ ಬ್ರೇಕರ್ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿಯೂ, ಟ್ರೈ ಬ್ರೇಕರ್ ಕ್ರಿಕೆಟ್ ತಂಡದ ಸ್ಥಾಪಕ ಸದಸ್ಯನಾಗಿಯೂ ಸಾಮಾಜಿಕ ಜೀವನದಲ್ಲಿ ಗುರುತಿಸಿಕೊಂಡಿದ್ದರು.
ಮೃತರು ತಾಯಿ, ಪತ್ನಿ, ಮಕ್ಕಳು, ಸಹೋದರನನ್ನು ಆಗಲಿದ್ದಾರೆ