Published
6 months agoon
By
Akkare Newsಪುತ್ತೂರು : ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸೇವಾ ಮಳಿಗೆ ‘ಸಿಝ್ಲರ್ ಅಗ್ರಿಝೋನ್’ ಬೊಳ್ವಾರಿನಲ್ಲಿನ ನ್ಯೂ ಅಂಕಲ್ ಸ್ವೀಟ್ಸ್ ಮುಂಭಾಗದ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಸಿಝ್ಲರ್ ಫ್ರೆಂಡ್ಸ್ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಕುಮಾರ್ ಶೆಟ್ಟಿ ರವರ ತಾಯಿ ಸುಲೋಚನಾ ಯನ್ ಶೆಟ್ಟಿ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು .ಅರ್ಚಕರಾದ ಜಯರಾಮ ಕೆದಿಲಾಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು .
ಪ್ರಸನ್ನ ಕುಮಾರ್ ಶೆಟ್ಟಿ ಸಹೋದರರಾದ ಸುಳ್ಯದಲ್ಲಿ ಎಸಿಎಫ್ ಆಗಿರುವ ಪ್ರವೀಣ್ ಶೆಟ್ಟಿ, ಪತ್ನಿ ಪ್ರತಿಮಾ ಪಿ ಶೆಟ್ಟಿ ,ಪುತ್ರಿಯರಾದ ಹಿತಾಲಿ ಹಾಗು ರೀಶಾ ,ಸಂಸ್ಥೆಯ ಮಾರ್ಕೆಟಿಂಗ್ ಹೆಡ್ ಹೇಮಂತ್ ಕುಮಾರ್ ,ಬೆಂಗಳೂರು ಸದಾಶಿವ ರೈ,ರಾಕೇಶ್ ಡಿ ಸೋಜಾ ,ಸಂತೋಷ್ ಕೆ, ರಫೀಕ್ ,ಕಟ್ಟಡ ಮಾಲಕ ಇಮ್ರಾಜ್ ಬೊಲ್ವಾರ್,ಸಂಸ್ಥೆಯ ಸಿಬ್ಬಂದಿಗಳಾದ ನಳಿನಿ ವಿಜೇತ ಬಾಲಕೃಷ್ಣ ಮದಕ,ಅರುಣ್ ನಗರ, ಹೇಮಂತ್ ಮಾಡವು ,ಹರ್ಷ ಮಿತ್ತುರು, ಸಹಿತ ಹಲವರು ಉಪಸ್ಥಿತರಿದ್ದರು .
ವಿವಿಧ ಮಾದರಿಯ ಔಷಧಿ ಸಿಂಪಡಿಸುವ ಯಂತ್ರ(ಪವರ್ ಸ್ಪೇಯರ್ಸ್), ಮರ ಕೊಯ್ಯುವ ಯಂತ್ರ, ಬ್ಯಾಟರಿ ಚಾಲಿತ ಸ್ಪೇಯರ್, ಗುಂಡಿ ತೋಡುವ ಯಂತ್ರ, ಅಗತೆ ಮಾಡುವ ಯಂತ್ರ, ವಿವಿಧ ಮಾದರಿಯ ಕಳೆ ಕೊಚ್ಚುವ ಯಂತ್ರಗಳು, ವಾಟರ್ ಪಂಪ್ ಸೆಟ್, ಕೊಟ್ಟಿಗೆ ತೊಳೆಯುವ ಯಂತ್ರ ಹಾಗೂ ಇನ್ನಿತರ ಕೃಷಿ ಯಂತ್ರೋಪಕರಣಗಳು ಹಾಗೂ ಇನ್ನಿತರ ಕೃಷಿ ಯಂತ್ರೊಪಕರಣಗಳು ದೊರೆಯಲಿದೆ ಎಂದು ಸಂಸ್ಥೆಯು ಪ್ರಕಟಣೆ ತಿಳಿಸಿದೆ .