ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಪ್ರಕಟಣೆ

ಮಂಗಳೂರು: ವೇಗ ನಿಯಂತ್ರಣಕ್ಕೆ “ಮೊಬೈಲ್‌ ಸ್ಪೀಡ್‌ ರಾಡರ್‌ ಗನ್‌’

Published

on

ಮಹಾನಗರ: ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ಚಾಲಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಗುರುವಾರ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಅವರ ಅಧ್ಯಕ್ಷತೆಯಲ್ಲಿ “ರಸ್ತೆ ಸುರಕ್ಷ ಸಭೆ’ಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯಂತೆ ಕಮಿಷನರೇಟ್‌ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರ ಸಭೆ,  ಪುರಸಭೆ/ ಪಾಲಿಕೆ ವ್ಯಾಪ್ತಿಯ ಹಾಗೂ ಇತರ ರಸ್ತೆಗಳಲ್ಲಿ “ಮೊಬೈಲ್‌ ಸ್ಪೀಡ್‌ ರ್ಯಾಡರ್‌ ಗನ್‌’ ಉಪಯೋಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಉಪ ಪೊಲೀಸ್‌ ಆಯುಕ್ತ ಬಿ.ಪಿ. ದಿನೇಶ್‌ ಕುಮಾರ್‌, ಎನ್‌ಎಚ್‌ ಎಐ ಯೋಜನ ನಿರ್ದೇಶಕ ಅಬ್ದುಲ್ಲ ಜಾವೇದ್‌ ಅಝ್ಮಿ, ಪಿಐಯು ಅನಿರುದ್ಧ ಕಾಮತ್‌, ಪಿಡಬ್ಲೂéಡಿ ಇಲಾಖೆಯಿಂದ ಎಇ ಲಾಯಿಡ್‌ ಡಿ’ಸಿಲ್ವ, ಸ್ಮಾರ್ಟ್‌ ಸಿಟಿ ವತಿಯಿಂದ ಎಇಇ ಮಂಜು ಕೀರ್ತಿ ಎಸ್‌. ಮನಪಾದಿಂದ ಇಇ ಜ್ಞಾನೇಶ್‌, ಎಇಇ ಎಂ.ಎನ್‌. ಶಿವಲಿಂಗಪ್ಪ, ಎಇಇ ಮಿಥುನ್‌ ಉಪಸ್ಥಿತರಿದ್ದರು.

ವೇಗ ಮಿತಿ ಸೂಚನ ಫಲಕ ಅಳವಡಿಕೆ
ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿ ವೇಗದ ಮಿತಿಯನ್ನು ಮೀರುವ ವಾಹನ ಚಾಲಕರ ವಿರುದ್ಧ “ಮೊಬೈಲ್‌ ಸ್ಪೀಡ್‌ ರ್ಯಾಡರ್‌ ಗನ್‌’ ಮೂಲಕ ಮಂಗಳೂರು  ಸಂಚಾರ ಪೊಲೀಸರು ಪ್ರಕರಣಗಳನ್ನು ದಾಖಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ವಿವಿಧ ವಾಹನಗಳಿಗೆ ನಿಗದಿಪಡಿಸಿರುವ
ವೇಗದ ಮಿತಿಯ ಸೂಚನ ಫಲಕಗಳನ್ನು ರಸ್ತೆಗಳ ಬದಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಅಳವಡಿಸುವಂತೆ ಸೂಚಿಸಿದೆ.

ರಸ್ತೆಗಳನ್ನು ಉಪಯೋಗಿಸುವ ಎಲ್ಲ ವಾಹನ ಚಾಲಕರು ವೇಗದ ಮಿತಿಯ ಸೂಚನಾ ಫಲಕಗಳಲ್ಲಿ ಕಾಣಿಸಿದ ಮಿತಿಗಿಂತ ಕಡಿಮೆ ವೇಗದಲ್ಲಿ ವಾಹನವನ್ನು ಚಲಾಯಿಸಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಗರ ಟ್ರಾμಕ್‌ ಪೊಲೀಸರ “ಅಪಘಾತ ತಡೆ ಅಭಿಯಾನ’ಕ್ಕೆ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

ವೇಗದ ಮಿತಿ ಹೀಗಿದೆ..
ಪ್ರಯಾಣಿಕರನ್ನು ಕರೆದೊಯ್ಯುವ 9ಕ್ಕಿಂತ ಕಡಿಮೆ ಸೀಟ್‌ ಹೊಂದಿರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 100 ಕಿ.ಮೀ., ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 70 ಕಿ.ಮೀ., ಇತರ ರಸ್ತೆಗಳಲ್ಲಿ 70 ಕಿ.ಮೀ ವೇಗ ಮಿತಿ. 9ಕ್ಕಿಂತ ಹೆಚ್ಚು ಸೀಟ್‌ ಹೊಂದಿರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 90 ಕಿ.ಮೀ., ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 60 ಕಿ.ಮೀ., ಮತ್ತು ಇತರ ರಸ್ತೆಗಳಲ್ಲಿ 60 ಕಿ.ಮೀ. ಎಲ್ಲ ರೀತಿಯ ಗೂಡ್ಸ್‌ ವಾಹನಗಳು ಮತ್ತು ಮೋಟಾರು ಸೈಕಲ್‌ಗ‌ಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಜಕ ಹೊಂದಿರುವ 4 ಲೇನ್‌ ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 80, ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 60 ಕಿ.ಮೀ. ಮತ್ತು ಇತರ ರಸ್ತೆಗಳಲ್ಲಿ 60 ಕಿ.ಮೀ., ತ್ರಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 50 ಕಿ.ಮೀ., ನಗರಸಭೆ, ಪುರಸಭೆಯ ರಸ್ತೆಗಳಲ್ಲಿ ಮತ್ತು ಇತರೆ ರಸ್ತೆಗಳಲ್ಲಿ 50 ಕಿ.ಮೀ. ವೇಗದ ಮಿತಿಯಲ್ಲಿ ಸಂಚರಿಸಬೇಕು.

Continue Reading
Click to comment

Leave a Reply

Your email address will not be published. Required fields are marked *

Advertisement