Published
6 months agoon
By
Akkare Newsಮಂಗಳೂರು, ಬೆಂಗಳೂರು ಮಧ್ಯೆ ಸುಗಮ ರಸ್ತೆ, ರೈಲು ಸಂಪರ್ಕಕ್ಕೆ ಮೊದಲ ಆದ್ಯತೆ – ಕ್ಯಾ। ಬ್ರಿಜೇಶ್ ಚೌಟ
ಪುತ್ತೂರು: ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ಆಶೀರ್ವಾದ ಪಡೆದುಕೊಂಡರು.
ಕೇಂದ್ರ ಸರಕಾರದ ಯೋಜನೆಗಳಲ್ಲಿ ಮೊದಲ ಆದ್ಯತೆ ಮಂಗಳೂರು ಮತ್ತು ಬೆಂಗಳೂರು ಮಧ್ಯೆ ರಸ್ತೆ ಮತ್ತು ರೈಲು ಸಂಪರ್ಕ ಸುಗಮಗೊಳಿಸುವುದು ಎಂದು ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೇಳಿದರು.
ಸಂಸದರಾಗಿ ಪ್ರಥಮ ಬಾರಿಗೆ ಪುತ್ತೂರಿಗೆ ಆಗಮಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಏಕಾದಶ ರುದ್ರ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ ಬಳಿಕ ದೇವಳದ ಹೋರಾಂಗಣದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವಾದ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವರ ದರುಶನ ಮಾಡಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ವಿಶೇಷವಾಗಿ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 3ನೇ ಬಾರಿಗೆ ದೇಶದ ಪ್ರಧಾನಿಯಾಗಿರುವುದು ಹೆಮ್ಮೆಯ ಸಂಗತಿ. ಅವರಿಗೆ ಮತ್ತು ಅವರ ಇಡಿ ಸಚಿವ ಸಂಪುಟಕ್ಕೆ ಶ್ರೀ ದೇವರ ಅಶೀರ್ವಾದ ಇರಲಿ ಎಂದು ಬಿಜೆಪಿ ಅಧ್ಯಕ್ಷರು ಮತ್ತು ಪ್ರಮುಖರ ಜೊತೆ ಸೇರಿಕೊಂಡು ಪ್ರಾರ್ಥನೆ ಮಾಡಿದ್ದೇವೆ.
ಈಗಾಗಲೇ ಸಂಸದನಾಗಿ ಜೂ.19ರಂದು ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ಜಿಲ್ಲೆಯಲ್ಲಿ ಅನುಷ್ಠಾನ ಹಂತದಲ್ಲಿರುವ ಎಲ್ಲಾ ಕೇಂದ್ರ ಸರಕಾರದ ಯೋಜನೆಗಳ ಕುರಿತು ಮಾಹಿತಿ
ಕೇಂದ್ರ ಸರಕಾರದ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಯಾವ ಯಾವ ಯೋಜನೆಗಳು ಯಾವ ಯಾವ ಹಂತದಲ್ಲಿದೆ ಅದರ ಕುರಿತು ಮಾಹಿತಿ ಕೇಳಿದ್ದೆನೆ. ಸಭೆಯ ಬಳಿಕ ಆದ್ಯತೆ ಮೇರೆಗೆ ಕಾರ್ಯ ನಡೆಯಲಿದೆ. ಅದರಲ್ಲೂ ಮೊದಲ ಆದ್ಯತೆ ಮಂಗಳೂರು ಮತ್ತು ಬೆಂಗಳೂರು ಮಧ್ಯೆ ರಸ್ತೆ ಮತ್ತು ರೈಲು ಸಂಪರ್ಕ ಸುಗಮಗೊಳಿಸುವುದು ಆಗಿದೆ. ಅದಕ್ಕಿರುವ ಕಾನೂನು ತೊಡಕು, ಪರಿಸರದ ತೊಡಕುಗಳನ್ನು ಅಧ್ಯಾಯನ ಮಾಡಿಕೊಂಡು ವೈಜ್ಞಾನಿಕ ವರದಿಯನ್ನು ಸಿದ್ದ ಮಾಡಿ ಕೇಂದ್ರ ಹೆದ್ದಾರಿ ಮತ್ತು ರೈಲ್ವೇ ಸಚಿವರೊಂದಿಗೆ ಜಂಟಿಯಾಗಿ ಮಾತನಾಡಿಕೊಂಡು ರೈಲ್ವೇ ಮತ್ತು ರಸ್ತೆಯ ಅಭಿವೃದ್ದಿ ಮಾಡುವುದು ನನ್ನ ಮೊದಲ ಆಧ್ಯತೆ ಎಂದರು.
ಅಧಿಕಾರಿಗಳ ಸಭೆಯ ಬಳಿಕ ಶಿರಾಡಿ ಸುರಂಗ ಯೋಜನೆ ಮಾಹಿತಿ:
ರಸ್ತೆ ಕಾಮಗಾರಿ ಬಿಸಿರೋಡ್‌ನಿಂದ ಅಡ್ಡಹೊಳೆಯ ತನಕ ಕೆಲಸ ಕಾರ್ಯ ನಡೆಯುತ್ತಿದೆ. ಶಕೇಶ್‌ಪುರದಲ್ಲಿ ಕೆಲಸ ನಡೆಯುತ್ತಿದೆ. ಸಕೇಶ್‌ಪುರ ಮತ್ತು ಅಡ್ಡಹೊಳೆಯ ಮಧ್ಯೆ ಶಿರಾಡಿ ಘಾಟಿಯನ್ನು ಏನು ಮಾಡಬೇಕೆಂಬ ಆಪ್ಪನ್ ಮಧ್ಯೆ ಸುರಂಗ ಯೋಜನೆಯೂ ಒಂದಾಗಿದೆ. ಇದು ಯಾವ ಹಂತದಲ್ಲಿದೆ ಎಂದು ಅಧಿಕಾರಿಗಳ ಸಭೆ ಕರೆದು ವಿಚಾರಿಸುತ್ತೇನೆ. ಶಿರಾಡಿಯ ಸುರಂಗ ಯೋಜನೆ ನೆನೆಗುದಿಗೆ ಬಿದ್ದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಸಂಸದರು ಉತ್ತರಿಸಿದರು.ಪುತ್ತೂರು ಬಿಜೆಪಿ ಕಚೇರಿ, ಪಂಚವಟಿ ಭೇಟಿ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ರುದ್ರ ಸೇವೆಯಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ.ವಸಂತ
ಕೆದಿಲಾಯ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ದೇವಳದಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಸಂಸದರಿಗೆಶಾಲು ಹೊದಿಸಿ ಗೌರವಿಸಿದರು. ಬಳಿಕ ಸಂಸದರು ತಮ್ಮಕಾರ್ಯಕರ್ತರೊಂದಿಗೆ ದೇವಳದಲ್ಲಿ ಅನ್ನಪ್ರಸಾದ ಸ್ವೀಕರಿಸಿಬಿಜೆಪಿ ಕಚೇರಿಗೆ ತೆರಳಿದರು.
ಅಲ್ಲಿಂದ ಸಂಘದಕಾರ್ಯಾಲಯ ಪಂಚವಟಿಗೆ ತೆರಳಿ ಅಲ್ಲಿಂದ, ಸಂಘದಹಿರಿಯ ಕಾರ್ಯಕರ್ತ ಬಿರ್ಮಣ್ಣ ಗೌಡ ಅವರ ಮನೆಗೆ ತೆರಳಿಅಲ್ಲಿಂದ ಅಸೈಗೋಳಿಯಲ್ಲಿ ಹಿಂದು ಹಿತರಕ್ಷಣೆಸಮಿತಿಯಿಂದ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲುತೆರಳಿದರು.ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತು ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ. ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷ ವಿದ್ಯಾ ಗೌರಿ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿನವ, ಜಯಶ್ರೀ ಎಸ್ ಶೆಟ್ಟಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಎಸ್.ಅಪ್ಪಯ್ಯ ಮಣಿಯಾಣಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ್, ಪ್ರಸನ್ನ ಕುಮಾರ್ ಮಾರ್ತ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ಉದಯ ಕುಮಾರ್ ಎಚ್, ಹರೀಶ್ ಬಿಜತ್ರೆ, ಪ್ರವೀಣ್ ತಿಂಗಳಾಡಿ, ಶಿವಪ್ರಸಾದ್ ಭಟ್, ಅನಿಲ್ ತೆಂಕಿಲ, ರಾಮಣ್ಣ ಗೌಡ ಗುಂಡೋಲೆ, ನಾಗರಾಜ್ ಭಟ್ ಕೆದುವಡ್ಕ, ನ್ಯಾಯವಾದಿ ವಿರೂಪಕ್ಷಾ ಭಟ್, ದಯಾನಂದ ಶೆಟ್ಟಿ, ಪುನಿತ್ ಮಾಡತ್ತಾರು, ಮುಕುಂದ ಬಜತ್ತೂರು, ಸುನಿಲ್ ದಡ್ಡು, ನಗರಭಾ ಸದಸ್ಯರಾದ ಗೌರಿ ಬನ್ನೂರು, ಪದ್ಮನಾಭ ಪಡೀಲು, ದೀಕ್ಷಾ ಪೈ, ಬಿಜೆಪಿ ಪ್ರಮುಖರಾದ ಬೂಡಿಯಾರ್ ರಾಧಾಕೃಷ್ಣ ರೈ, ಇಂದುಶೇಖರ್, ಸಹಜ್ ರೈ ಬಳಜ್ಜ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.