ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶಾಲಾ ಚಟುವಟಿಕೆ

66 ಸರಕಾರಿ ಶಾಲೆಗಳಿಗೆ “ಆಂಗ್ಲ’ ಮಾಧ್ಯಮ ಭಾಗ್ಯ!

Published

on

ಮಂಗಳೂರು: ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿಗಳ ಜತೆಗೆ ಕರಾವಳಿಯ 66 ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿಗಳನ್ನು ಈ ವರ್ಷದಿಂದ ಹೊಸದಾಗಿ ಆರಂಭಿಸಲು ಸರಕಾರ ಹಸುರು ನಿಶಾನೆ ತೋರಿದೆ.

ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಹಾಗೂ ಉಡುಪಿ ಜಿಲ್ಲೆಯಲ್ಲಿ 36 ಹೊಸ ಆಂಗ್ಲಮಾಧ್ಯಮ ತರಗತಿ ಈ ಬಾರಿ ಆರಂಭವಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 82 ಹಾಗೂ ಉಡುಪಿಯಲ್ಲಿ 45 ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿ ನಡೆಯುತ್ತಿದೆ. ಈ ಮೂಲಕ ಆಂಗ್ಲ ಮಾಧ್ಯಮ ಇರುವ ಸರಕಾರಿ ಶಾಲೆಗಳ ಸಂಖ್ಯೆ 193ಕ್ಕೆ ಏರಿಕೆಯಾಗಿದೆ.

ಆಯ್ಕೆಗೊಂಡ ಶಾಲೆಗಳಲ್ಲಿ ಆಂಗ್ಲ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಬೋಧಿಸಬಲ್ಲ ಶಿಕ್ಷಕರನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ನೀಡಲಾಗುತ್ತದೆ. ಇಂಗ್ಲಿಷ್‌ ಮಾಧ್ಯಮ ತರಗತಿ ಪ್ರಾರಂಭಿಸಲು ಅಗತ್ಯವಾದ ಪಠ್ಯಪುಸ್ತಕ ಹಾಗೂ ಇ-ಕಂಟೆಂಟ್‌ಗಳನ್ನು ಪಡೆದುಕೊಳ್ಳಬೇಕಾಗಿದೆ. ತರಗತಿಯಲ್ಲಿ ಬೋಧನೆ ಹಾಗೂ ಕಲಿಕೆಯ ಪ್ರಕ್ರಿಯೆ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರದೆ ಕಲಿಕಾ ಫಲಿತ ಚಟುವಟಿಕೆಯನ್ನು ಒಳಗೊಂಡಿರುತ್ತದೆ.

 

ಏನಿದು ಆಂಗ್ಲ ನಿಯಮ?
2019-20ನೇ ಸಾಲಿನಿಂದ ರಾಜ್ಯದ 1 ಸಾವಿರ ಸರಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಹಾಲಿ ಇರುವ ಕನ್ನಡ ಮಾಧ್ಯಮದ ಜತೆಗೆ ಆಂಗ್ಲಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಯನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿತ್ತು. ಅದರ ಪ್ರಕಾರವೇ ಹೊಸದಾಗಿ ಪ್ರಸ್ತಾವನೆ ಪಡೆದು ತಾಲೂಕು/ಜಿಲ್ಲಾ/ವಿಭಾಗ/ ಹಂತದಲ್ಲಿ ಪರಿಶೀಲನೆ ಸಮಿತಿ ಪರಿಶೀಲಿಸಿ ಶಿಫಾರಸು ಮಾಡಲು ಚೆಕ್‌ಲಿಸ್ಟ್‌ನೊಂದಿಗೆ ವೇಳಾಪಟ್ಟಿ ನಿಗದಿ ಮಾಡಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಈ ಪೈಕಿ ಪರಿಶೀಲಿಸಿ ಈ ವರ್ಷ ರಾಜ್ಯದಲ್ಲಿ ಒಟ್ಟು 1,419 ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಸ್ಥಳೀಯ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ತರಗತಿ ಪ್ರಾರಂಭಿಸಲಾಗುತ್ತದೆ.ಶಿಕ್ಷಕರದ್ದೇ ಸವಾಲು!
ಆಂಗ್ಲಮಾಧ್ಯಮ ಬೇಕು ಎಂಬ ಬಗ್ಗೆ ಪಾಲಕರ ಬೇಡಿಕೆಯ ಕಾರಣದಿಂದ ಸರಕಾರ ಅನುಮತಿ ನೀಡಿದೆ. ಆದರೆ ಮೊದಲೇ ಶಿಕ್ಷಕರ ಕೊರತೆ ಎದುರಿಸುತ್ತಿರುವ ಸರಕಾರಿ ಶಾಲೆಗಳಲ್ಲಿ ಈಗ ಆಂಗ್ಲಮಾಧ್ಯಮವೂ ಆರಂಭವಾಗುವ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಒತ್ತಡ ಅಧಿಕವಾಗಲಿದೆ. ಈಗ ಇರುವ ಶಿಕ್ಷಕರೇ ಆಂಗ್ಲಮಾಧ್ಯಮದಲ್ಲಿಯೂ ಬೋಧಿಸುವ ಅನಿವಾರ್ಯ ಸ್ಥಿತಿಯಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆಯಾದರೂ ಅದು ಪೂರ್ಣ ಮಟ್ಟದಲ್ಲಿ ಲಾಭ ತರುವುದಿಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ.

ಆಂಗ್ಲಮಾಧ್ಯಮಕ್ಕೆ ಆಯ್ಕೆಯಾದ ಶಿಕ್ಷಣಾಧಿಕಾರಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು

ದಕ್ಷಿಣ ಕನ್ನಡ ಜಿಲ್ಲೆ
-ಬಂಟ್ವಾಳ – ಮೂಡುಪಡುಕೋಡಿ, ಒಕ್ಕೆತ್ತೂರು, ಕಡೇಶ್ವಾಲ್ಯ, ಶಂಭೂರು, ಮಾಣಿ, ಕಾವಲಕಟ್ಟೆ (ಉರ್ದು), ಕೊಡಂಗೆ, ತುಂಬೆ, ಬಾಳ್ತಿಲ, ಬ್ರಹ್ಮರಕೂಟ್ಲು, ಮಿತ್ತೂರು, ಮೂಲರಪಟ್ಣ (ಉರ್ದು), ನಲ್ಕೆಮಾರ್‌.
-ಬೆಳ್ತಂಗಡಿ- ಸ.ಹಿ.ಪ್ರಾ. ಶಾಲೆ ಕಾಶಿಪಟ್ಣ
-ಮಂಗಳೂರು ಉತ್ತರ – ಮರಕಡ, ಕರಂಬಾರು, ಸ್ಯಾಂಡ್‌ಸ್ಪಿಟ್‌, ಮನಂಪಾಡಿ, ಕೆಂಜಾರ್‌, ಕರ್ನಿರೆ.
-ಮಂಗಳೂರು ದಕ್ಷಿಣ- ರಾಜಗುಡ್ಡೆ, ನ್ಯೂಪಡು³, ಕಿನ್ಯಾ, ಉರುಮನೆ
-ಪುತ್ತೂರು- ಕೋಡಿಂಬಾಡಿ, ಸಾಮೆತ್ತಡ್ಕ
-ಸುಳ್ಯ- ದೇವಚಳ್ಳ, ಪಂಜ, ಅರಂತೋಡು, ಅಜ್ಜಾವರ

ಉಡುಪಿ ಜಿಲ್ಲೆ
-ಬೈಂದೂರು- ಶಿರೂರು, ಬೊಕ್ಕಪಟ್ಣ (ಉರ್ದು), ಕೋಡಿಕನ್ಯಾನ ಕೋಡಿ, ನಾವುಂದ, ಮರವಂತೆ, ಆಲೂರು, ನಾಗೂರು, ಅರೆಶಿರೂರು, ಮೆಟ್ಟಿನಹೊಳೆ, ಕಿರಿಮಂಜೇಶ್ವರ, ಕಂಬದಕೋಣೆ, ಕಲೊ¤àಡು, ಬಿಜೂರು, ಉಳ್ಳೂರು, ಹೆರಂಜಾಲು, ನೂಜಾಡಿ,
-ಕಾರ್ಕಳ – ಬಸ್ರಿ ಬೈಲೂರು, ಕಾಬೆಟ್ಟು, ಮಿಯಾರು, ಮುಂಡ್ಕೂರು, ಶಿವಪುರ, ಕಲ್ಲಂಬಾಡಿಪದವು-ನಿಟ್ಟೆ
-ಕುಂದಾಪುರ- ಕಂಡ್ಲೂರು ಕನ್ನಡ, ಕೋಣಿ, ಕಳವಾರ, ಮೊಳಹಳ್ಳಿ, ಬೇಲೂರು, ಹಳ್ಳಾಡಿ ಹರ್ಕಾಡಿ, ಮೇಲ್ಕಟೆRರೆ ಕೋಣಿ, ಗಂಗೊಳ್ಳಿ (ಉರ್ದು), ತೆಕ್ಕಟ್ಟೆ, ಅಸೋಡು, ಬೈಲೂರು,
-ಉಡುಪಿ- ಕೊಡವೂರು, ಪೊಲಿಪು-ಪಡು -ಬ್ರಹ್ಮಾವರ- ಬಳುRದ್ರು

ಭಾಷಾ ಮಾಧ್ಯಮ ಆರಂಭ
75ಕ್ಕಿಂತ ಅಧಿಕ ಮಕ್ಕಳಿರುವ ಶಾಲೆಗಳನ್ನು ಗುರುತಿಸಿ ದ್ವಿಭಾಷಾ ಮಾಧ್ಯಮ ಆರಂಭಿಸಲು ಸರಕಾರ ಸೂಚನೆ ನೀಡಿದೆ. ಮೂಲಭೂತ ಸೌಕರ್ಯ ಇರುವುದನ್ನು ನೋಡಿಕೊಂಡು ಅನುಮತಿ ನೀಡಲಾಗಿದೆ. ಶಾಲಾಭಿವೃದ್ದಿ ಸಮಿತಿ, ಪಾಲಕ-ಪೋಷಕರ ನೆರವಿನಿಂದ ಆಂಗ್ಲಮಾಧ್ಯಮ ಶಾಲೆಗಳು ನಡೆಯಲಿವೆ.
ವೆಂಕಟೇಶ ಸುಬ್ಯಾಯ ಪಟಗಾರ ಹಾಗೂ ಗಣಪತಿ ಕೆ.
-ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಪನಿರ್ದೇಶಕರು ದ.ಕ. ಹಾಗೂ ಉಡುಪಿ

 

Continue Reading
Click to comment

Leave a Reply

Your email address will not be published. Required fields are marked *

Advertisement