Published
6 months agoon
By
Akkare News
ಮೂಲಗಳ ಪ್ರಕಾರ, ರಾಮಮಂದಿರ ಸಂಕೀರ್ಣದ ವಿಐಪಿ ಗೇಟ್ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ. ಸಹೋದ್ಯೋಗಿ ಭದ್ರತಾ ಸಿಬ್ಬಂದಿ ಓಡಿ ಬಂದು ನೋಡಿದಾಗ ಶತ್ರುಘ್ನ ವಿಶ್ವಕರ್ಮ ಹಣೆಗೆ ಗುಂಡು ತಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದ್ರೂ ಆ ವೇಳೆಗೆ ಅವರು ಮೃ*ತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇವರು ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು, ಘಟನಾ ಸ್ಥಳಕ್ಕೆ ಐಜಿ ಹಾಗೂ ಎಸ್‌ಎಸ್‌ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವೇಳೆ ಶತ್ರುಘ್ನ ವಿಶ್ವಕರ್ಮ ಮೊಬೈಲ್ ನೋಡುತ್ತಿದ್ದು, ಅವರ ಜೊತೆ ಬೇರೆ ಸಿಬ್ಬಂದಿ ಇದ್ದರು ಎಂದು ಮೊದಲ ಮಾಹಿತಿ ದೊರೆತಿದೆ. ಆದ್ರೆ, ಗುಂಡು ಹಣೆಗೆ ಹೇಗೆ ತಾಗಿತು ಅನ್ನೋ ಬಗ್ಗೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಯೋಧ ಶತ್ರುಘ್ನ ವಿಶ್ವಕರ್ಮ ಅವರ ಸಹೋದರರು ಆರೋಪಿಸಿದ್ದಾರೆ. ಸಹೋದರನ ಸಾ*ವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ತನಿಖೆಗೆ ಆಗ್ರಹಿಸಿದ್ದಾರೆ.