Published
6 months agoon
By
Akkare Newsಸರ್ಕಾರಿ ಪ್ರೌಢಶಾಲೆ ಕಡಬ ಇದರ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಚುನಾವಣೆಯು ದಿನಾಂಕ 14.06.2024ರಂದು ಶಾಲೆಯಲ್ಲಿ ನಡೆದಿದ್ದು ಶಾಲಾ ನಾಯಕನಾಗಿ 10ನೇ ತರಗತಿಯ ಲಿಖಿತ್ ಹಾಗೂ ಉಪನಾಯಕನಾಗಿ 9ನೇ ತರಗತಿಯ ಮನ್ವಿತ್ .ಕೆ ಆಯ್ಕೆಯಾಗಿದ್ದಾರೆ.
ಸಂಪೂರ್ಣ ಪ್ರಜಾಸತಾತ್ಮಕ ಚುನಾವಣೆಯ ಮಾದರಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಶಾಲೆಯ ನಾಯಕ ಹಾಗೂ ಉಪನಾಯಕ ಸ್ಥಾನ ಸೇರಿದಂತೆ ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 58 ವಿದ್ಯಾರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.ಮೂರು ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 250 ವಿದ್ಯಾರ್ಥಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.ಶಾಲಾ ಮಂತ್ರಿಮಂಡಲದ ವಿವಿಧ ಸ್ಥಾನಗಳ ಪೈಕಿ ಗೃಹ ಮಂತ್ರಿಯಾಗಿ ದಿಲೀಪ್ 10ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಜೀವನ್ 10ನೇ ತರಗತಿ ,ಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಾ 10ನೇ ತರಗತಿ ,ಶಿಕ್ಷಣ ಮಂತ್ರಿಯಾಗಿ ಉಷಾ 10ನೇ ತರಗತಿ ,ವಾರ್ತಾ ಮಂತ್ರಿಯಾಗಿ ಜಯಪ್ರದ 9ನೇ ತರಗತಿ ,ಆಹಾರ ಮಂತ್ರಿಯಾಗಿ ಶರಣ್ಯ 10ನೇ ತರಗತಿ ,ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಯಕ್ಷಿತಾ ಹತ್ತನೇ ತರಗತಿ, ನೀರಾವರಿ ಮಂತ್ರಿಯಾಗಿ ಪ್ರವೀಣ 10ನೇ ತರಗತಿ, ತೋಟಗಾರಿಕಾ ಮಂತ್ರಿಯಾಗಿ ಸುಧಾಕರ 10ನೇ ತರಗತಿ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ವೈಷ್ಣವಿ ಹತ್ತನೇ ತರಗತಿ ಆಯ್ಕೆಯಾದರು.ಶಾಲಾ ಉಪ ಪ್ರಾಂಶುಪಾಲರಾದ ಡಾ. ವೇದಾವತಿ ಇವರ ಮಾರ್ಗದರ್ಶನದಲ್ಲಿ ನಡೆದ ಪ್ರಕ್ರಿಯೆ ಯಲ್ಲಿ ಸಹ ಶಿಕ್ಷಕಿಯಾದ ಶ್ರೀಮತಿ ಮಮತಾ .ಪಿ ಹಾಗೂ ಅಂಬಿಕಾ ಚುನಾವಣಾ ಉಸ್ತುವಾರಿ ಶಿಕ್ಷಕರಾಗಿ ಸಹಕರಿಸಿದರು.ಶಿಕ್ಷಕ ವೃಂದದವರು ವಿವಿಧ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿದರು.