ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಮುದುಕನ ಮದುವೆ… ಇದು ಜೋಕ್ ಅಲ್ಲ.. ನಿಜಾನೇ…!!!

Published

on

80ರ ವೃದ್ಧನನ್ನು ಪ್ರೀತಿಸಿ ಮದುವೆಯಾದ 23 ವರ್ಷದ ಯುವತಿ

ಚೀನಾ: 23 ವರ್ಷದ ಯುವತಿಯೊಬ್ಬಳು 80 ರ ವೃದ್ಧನನ್ನು ಪ್ರೀತಿಸಿ ಮದುವೆಯಾಗಿರುವ ಘಟನೆ  ಚೀನಾದ ಹೆಬೈ ಪ್ರಾಂತ್ಯದಲ್ಲಿ ನಡೆದಿದೆ. 23 ವರ್ಷದ ಯುವತಿಯೊಬ್ಬಳು ವೃದ್ಧಾಶ್ರಮದಲ್ಲಿನ 80 ವರ್ಷದ ವೃದ್ಧನೊಂದಿಗೆ ಪ್ರೀತಿಯಲ್ಲಿ ಬಿದ್ದು ಆತನನ್ನೇ ಮದುವೆಯಾಗಿದ್ದಾಳೆ. 

 

 

ಹೆಬೈ ಪ್ರಾಂತ್ಯದ ವೃದ್ಧಾಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬಾಕೆ ಅಲ್ಲಿ ಲೀ ಎಂಬ 80 ರ ವೃದ್ಧನ ಪರಿಚಯವಾಗುತ್ತದೆ. ಆ ವೃದ್ಧನ ಪ್ರಬುದ್ಧತೆ, ಬುದ್ಧಿವಂತಿಕೆಗೆ ಆಕರ್ಷಿತಳಾದ ಕ್ಸಿಯಾಫಾಂಗ್ ಆತನ ಪ್ರೀತಿಯಲ್ಲಿ ಬೀಳುತ್ತಾಳೆ. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಈ ಬಗ್ಗೆ ಕ್ಸಿಯಾಫಾಂಗ್ ತನ್ನ ಕುಟುಂಬದವರ ಬಳಿ ಹೇಳಿದಾಗ ಅವರು ಈಕೆಯ ಈ ನಿರ್ಧಾರಕ್ಕೆ ಒಪ್ಪಲಿಲ್ಲ. ನನಗೆ ಲೀ ಅವರೇ ಬೇಕೆಂದು ಹಠ ಹಿಡಿದ ಕ್ಸಿಯಾಫಾಂಗ್ ತನ್ನ ಕುಟುಂಬದೊಂದಿಗಿನ ಎಲ್ಲಾ ಸಂಬಂಧವನ್ನು ಮುರಿದು ಕೊನೆಗೆ ಲೀ ಅವರನ್ನು ವಿವಾಹವಾಗಿದ್ದಾಳೆ ಎಂದು ವರದಿಯಾಗಿದೆ.

 

ಇಬ್ಬರೂ ಇತ್ತೀಚಿಗೆ ಸರಳವಾಗಿ ವಿವಾಹವಾಗಿದ್ದು, ಇಬ್ಬರ ಕುಟುಂಬದವರೂ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ವರದಿಯಾಗಿದೆ. 
 
ಈ ನವ ದಂಪತಿಗಳ ಪ್ರೇಮ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವರು ಈ ಯುವತಿ ವೃದ್ಧನನ್ನು ಹಣಕ್ಕಾಗಿ ಮದುವೆಯಾಗಿದ್ದಾಳೆ ಎಂದು ಹೇಳಿದರೇ, ಇನ್ನೂ ಕೆಲವರು ಆಕೆಯ ನಿಷ್ಕಲ್ಮಶ ಪ್ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement