ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಮಂಗಳೂರು ನಲ್ಲಿ “ಕಳ್ಳ – ಪೊಲೀಸ್ ಆಟ” ” ಪೊಲೀಸ್ ರನ್ನೇ ಪಿಕ್ ಪೋಕೆಟ್ ಮಾಡಿದ ಚಾಣಾಕ್ಷ ಕಳ್ಳ “

Published

on

ಮಂಗಳೂರು: ಬಿಜೆಪಿ ಪ್ರತಿಭಟನೆ ಸಂದರ್ಭ ಸ್ಥಳದಲ್ಲಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರ ಪರ್ಸನ್ನು ಕಳ್ಳ ಎಗರಿಸಿರುವ ಘಟನೆ ನಗರದ ಪಿವಿಎಸ್‌ ಬಳಿ ಗುರುವಾರ ನಡೆದಿದೆ.

 

ಪ್ರತಿಭಟನೆಯ ಸಂದರ್ಭ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿದ್ದಾರೆ. 

 

ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ಕಳ್ಳ “ಸಿವಿಲ್‌ ಡ್ರೆಸ್‌’ನಲ್ಲಿದ್ದ ಪೊಲೀಸ್‌ ಸಿಬ್ಬಂದಿಯ ಪರ್ಸ್‌ ಎಗರಿಸಿದ್ದಾನೆ ಎಂದು ತಿಳಿದು ಬಂದಿದೆ.
 
ಸ್ಥಳದಲ್ಲಿದ್ದ ಮಾಧ್ಯಮದವರ ವೀಡಿಯೋದಲ್ಲಿ ಈ ದೃಶ್ಯ ಸೆರೆಯಾಗಿದೆ ಎಂದು ತಿಳಿದು ಬಂದಿದೆ. 

ಆರೋಪಿಯ ಪತ್ತೆಗಾಗಿ ಶೋಧ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement