Published
6 months agoon
By
Akkare Newsಶೃಂಗೇರಿ ಶ್ರೀಗಳ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ ಸ್ಮರಣಾರ್ಥ
ಕಟೀಲು: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೆಯ ಅಧಿಪತಿಗಳಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ (1974-2024)ದ ಸಂಸ್ಮರಣಾರ್ಥ ಶ್ರೀಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಶೃಂಗೇರಿ ಶಾರದಾ ಪೀಠದ ವತಿಯಿಂದ 40 ಲಕ್ಷ ರೂ. ಮೌಲ್ಯದ ಸ್ವರ್ಣಪಾದುಕೆ ಹಾಗೂ ಒಡ್ಯಾಣವನ್ನು ಸಮರ್ಪಿಸಲಾಯಿತು.