ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ಮೆಕ್ಕಾ ಯಾತ್ರೆ ವೇಳೆ ದುರಂತ : ತೀವ್ರ ಶಾಖಕ್ಕೆ ಕನಿಷ್ಠ 68 ಭಾರತೀಯರು ಸಾ*ವು

Published

on

ಸೌದಿ ಅರೇಬಿಯಾ : ಈ ವರ್ಷದ ಹಜ್ ಯಾತ್ರೆಯಲ್ಲಿ ಕನಿಷ್ಠ 68 ಭಾರತೀಯರು ಸಾ*ವನ್ನಪ್ಪಿದ್ದಾರೆ ಎಂದು ಸೌದಿ ಅರೇಬಿಯಾ ದೃಢಪಡಿಸಿದೆ. ಅಲ್ಲದೇ, ಹಲವಾರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಸೌದಿಯ ಪವಿತ್ರ ನಗರವಾದ ಮೆಕ್ಕಾದಲ್ಲಿ ದಾಖಲೆಯ ತಾಪಮಾನದ ಪರಿಣಾಮದಿಂದ ಈ ವರ್ಷ 550 ಯಾತ್ರಾರ್ಥಿಗಳು ಸಾ*ವನ್ನಪ್ಪಿದ್ದಾರೆ.

ನಾವು ಸುಮಾರು 68 ಮಂದಿ(ಭಾರತೀಯರು) ಸ*ತ್ತಿರುವುದನ್ನು ದೃಢಪಡಿಸಿದ್ದೇವೆ. ಕೆಲವು ನೈಸರ್ಗಿಕ ಕಾರಣಗಳಿಂದಾಗಿ ಮತ್ತು ಇನ್ನು ಕೆಲವು ವಯಸ್ಸಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಇದಕ್ಕೆ ಕಾರಣವಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಅಲ್ಲದೇ, ಅನೇಕ ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದೂ ವರದಿಯಾಗಿದೆ, ಆದರೆ, ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬ ನಿಖರ ಸಂಖ್ಯೆ ತಿಳಿದು ಬಂದಿಲ್ಲ. ಇದು ಪ್ರತಿ ವರ್ಷ ಮರುಕಳಿಸುವ ಘಟನೆಯಾಗಿದೆ ಎಂದು ಹೇಳಲಾಗಿದೆ।

ಇಸ್ಲಾಮಿನ ಕೇಂದ್ರ ಭಾಗವಾದ ಹಜ್ ಯಾತ್ರೆಯು ಇಸ್ಲಾಮಿಕ್ ತಿಂಗಳ ಧು ಅಲ್-ಹಿಜ್ಜಾದಲ್ಲಿ ಸೌದಿ ಅರೇಬಿಯಾದ ಮೆಕ್ಕಾಗೆ ವಾರ್ಷಿಕವಾಗಿ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಈ ವರ್ಷದ ತೀರ್ಥಯಾತ್ರೆಗೆ ತೀವ್ರವಾದ ಶಾಖ ಮತ್ತು ಏರುತ್ತಿರುವ ತಾಪಮಾನ ಪರಿಣಾಮ ಬೀರಿದೆ, ಇದು ಇತ್ತೀಚಿನ ದಶಕಗಳಲ್ಲಿ ಅತ್ಯಧಿಕವಾಗಿದೆ.

 

ಸೌದಿ ಅಧ್ಯಯನದ ಪ್ರಕಾರ…

ಸೌದಿಯ ಅಧ್ಯಯನವು ತೀರ್ಥಯಾತ್ರಾ ಪ್ರದೇಶದಲ್ಲಿ ತಾಪಮಾನವು ಪ್ರತಿ ದಶಕಕ್ಕೆ 0.4 ಡಿಗ್ರಿ ಸೆಲ್ಸಿಯಸ್ ಹೇಗೆ ಹೆಚ್ಚಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. 2023 ರಲ್ಲಿ, ಹಜ್ ಸಮಯದಲ್ಲಿ 200 ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ತಾಪಮಾನವು 48 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ 2,000 ಕ್ಕೂ ಹೆಚ್ಚು ಜನರು ಶಾಖ-ಸಂಬಂಧಿತ ಒತ್ತಡದಿಂದ ಬಳಲುತ್ತಿದ್ದರು.
2024 ರ ಹಜ್‌ನಲ್ಲಿ 550 ಸಾವುಗಳಾಗಿರುವ ಬಗ್ಗೆ ವರದಿಯಾಗಿದೆ, 323 ಈಜಿಪ್ಟಿನವರು ಮತ್ತು 60 ಜೋರ್ಡಾನಿಯನ್ನರು ತೀವ್ರ ಶಾಖದಿಂದ ಮೃ*ತಪಟ್ಟಿದ್ದಾರೆ. ಇರಾನ್, ಇಂಡೋನೇಷಿಯಾ, ಟುನೀಶಿಯಾ, ಸೆನೆಗಲ್ ಮತ್ತು ಇರಾಕ್‌ನ ಕುರ್ದಿಸ್ತಾನ್ ಪ್ರದೇಶ ದೇಶಗಳ ಅಧಿಕಾರಿಗಳಿಂದ ಸಾ*ವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 

Continue Reading
Click to comment

Leave a Reply

Your email address will not be published. Required fields are marked *

Advertisement