Published
6 months agoon
By
Akkare News(24/6/2024) ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ಪುತ್ತೂರು ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಬಸ್ ಸಮಸ್ಯೆ ಬಗ್ಗೆ ಸಂವಾದ ನಡೆಸಿದರು.
ಈ ಸಮಯದಲ್ಲಿ ಪುತ್ತೂರು -ಸವಣೂರು-ಆಲಂಕಾರು ಮಾರ್ಗವಾಗಿ ಸಂಜೆಯ ಸಮಯ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿ ನಾಯಕ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝೈನು ಆಲಂಕಾರು ಶಾಸಕರ ಬಳಿ ಮನವಿ ಮಾಡಿದರು… ಸ್ಪಂದಿಸಿದ ಶಾಸಕರು “ಆದಷ್ಟು ಬೇಗ ಬಗೆಹರಿಸುವೆ” ಎಂದು ಮಾತು ನೀಡಿದ್ದಾರೆ.
ಹೀಗೆ ಇನ್ನಿತರ ಮಾರ್ಗವಾಗಿ ಚಲಿಸುವ, ಸಮಸ್ಯೆ ಇರುವ ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕರು ಹೇಳಿದ್ದಾರೆ.