Published
6 months agoon
By
Akkare Newsಶ್ರೀ ಬಾಲಕೃಷ್ಣ ಪೂಜಾರಿ ಪೆರುವಾಯಿ ಸಾರಥ್ಯದ, ಕಿಶೋರ್ ಜೋಗಿ ಉಬಾರ್ ಇವರ ಸಂಚಾಲಕತ್ವದಲ್ಲಿ ಗಯಾಪದ ಕಲಾವಿದೆರ್ ಉಬಾರ್ ತಂಡವು 6ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ ಈ ವರ್ಷದ ನೂತನ ಕಲಾ ಕಾಣಿಕೆ “ನಾಗಮಾಣಿಕ್ಯ” ಎಂಬ ಪೌರಾಣಿಕ ನಾಟಕದ ಶುಭ ಮೂಹೂರ್ತವು ಶ್ರೀ ಸಹಸ್ರಲಿಂಗೇಶ್ವರ ಮಹಾಂಕಾಳಿ ದೇವಸ್ಥಾನ, ಗಯಾಪದ ಕ್ಷೇತ್ರ ದಕ್ಷಿಣ ಕಾಶಿ ಉಪ್ಪಿನಂಗಡಿಯಲ್ಲಿ ನೆರವೇರಿತು.
ಶ್ರೀ ದೇವಾಲಯದ ಪ್ರಧಾನ ಅರ್ಚಕರಾದ ಹರೀಶ್ ಉಪಾಧ್ಯಾಯರು ಶ್ರೀದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಹೊಸ ನಾಟಕದ ಶುಭ ಮೂಹೂರ್ತವನ್ನು ನೆರವೇರಿಸಿದರು.
ಶ್ರೀ ಕ್ಷೇತ್ರದ ನೇತ್ರಾವತಿ ಸಭಾಂಗಣದಲ್ಲಿ ನಡೆದ ಶುಭ ಮೂಹೂರ್ತದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ನಾಯಕ್ ಹಾಗೂ ಸದಸ್ಯರಾದ ಶ್ರೀ ಗೋಪಾಲಕೃಷ್ಣ ರೈ, ಶ್ರೀ ಕೃಷ್ಣ ರಾವ್‍ಅರ್ತಿಲ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಅಧ್ಯಕ್ಷರಾದ ಶರತ್‍ಕೋಟೆ, ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಕಾರ್ಯದರ್ಶಿಯಾದ ಐ. ಚಿದಾನಂದ ನಾಯಕ್, ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದಕಂಗ್ವೆ ವಿಶ್ವನಾಥ ಶೆಟ್ಟಿ, ನಾಟಕದರಚನೆ ಹಾಗೂ ನಿರ್ದೇಶಿಸಿದ ಕಲಾ ತಪಸ್ವಿರವಿಶಂಕರ್ ಶಾಸ್ತ್ರಿ ಮಣಿಲ, ಸಂಗೀತ ನಿರ್ದೇಶಕರಾದ ಶ್ರೀ ಕಾರ್ತಿಕ್ ಶಾಸ್ತ್ರಿ ಮಣಿಲ, ಶ್ರೀ ಮಹಾವಿಷ್ಣು ದೇವಸ್ಥಾನದ ಮುಕ್ತೇಸರರಾದ ಶ್ರೀ ರಾಜೇಶ್ ಶಾಂತಿನಗರ, ನಾಟಕತಂಡದ ಸಾರಥ್ಯ ವಹಿಸಿದ ಶ್ರೀ ಬಾಲಕೃಷ್ಣ ಪೂಜಾರಿ ಪೆರುವಾಯಿ ಹಾಗೂ ತಂಡದ ಸಂಚಾಲಕರಾದ ಕಿಶೋರ್ ಜೋಗಿ ಉಬಾರ್ ಉಪಸ್ಥಿತರಿದ್ದರು.
ಈ ಶುಭ ಸಂದರ್ಭದಲ್ಲಿ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಮಹೇಂದ್ರ ವರ್ಮ, ಜಯರಾಮ್ ಶೆಟ್ಟಿ ಮಲ್ಲಿಕಾ, ಸುಧಾಕರ ಶೆಟ್ಟಿಕೋಟೆ, ಪುಷ್ಪಾಕರ ಇಲಂತಿಳ, ಗುಣಕರಅಗ್ನಾಡಿ, ಜತೀಂದ್ರ ಶೆಟ್ಟಿ, ಶ್ರೀ ಗಣೇಶ್ ಭಟ್ ಹರಿ ಜುವ್ಯೆಲ್ಲರ್ಸ್, ದೇವಸ್ಥಾನದ ಸಿಬ್ಬಂದಿಗಳಾದ ದಿವಾಕರ ಕಟ್ಟೆಚ್ಚಾರು, ಪದ್ಮನಾಭ ಕುಲಾಲ್, ಪ್ರಸಾದ್, ಆಶಾ ಕಾರ್ಯಕರ್ತೆಯಾದ ಅನಂತಾವತಿ ಉಪಸ್ಥಿತರಿದ್ದರು.
ತಂಡದ ಕಲಾವಿದರಾದ ಗಂಗಾಧರ ಟೈಲರ್, ಸುನೀಲ್ ಪೆರ್ನೆ, ದಿವಾಕರ ಸುರ್ಯ, ರಾಜಶೇಖರ್ ಶಾಂತಿನಗರ, ಲಕ್ಷ್ಮಣ್ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ್, ಸಂದ್ಯಾಶ್ರೀ ಹಿರೇಬಂಡಾಡಿ, ಉದಯ ಪುತ್ತೂರು, ಅನುಷಾ ಜೋಗಿ ಪುರುಷರಕಟ್ಟೆ, ಅನಿಲ್ ಇರ್ದೆ, ಚೇತನ್ ಪಡೀಲ್, ಸತೀಶ್ ಹೆನ್ನಾಳ, ವರ್ಣಾಲಂಕಾರದ ಪ್ರದೀಪ್ ಕಾವು, ಕೃಷ್ಣ ಮುಂಡ್ಯಾ, ಸಿದ್ದು ಬೆದ್ರ, ತಂಡದ ಸಂಚಾಲಕರದ ಶ್ರೀ ಕಿಶೋರ್ ಜೋಗಿಯವರು ಪ್ರಾಸ್ತಾವನೆಯೊಂದಿಗೆ ನಮ್ಮ ತಂಡಕ್ಕೆ ಊರ ಪರವೂರ ಕಲಾಭಿಮಾನಿಗಳ, ಕಲಾ ಪೋಷಕರ ಸಹಕಾರವನ್ನು ಕೋರಿ ಧನ್ಯವಾದವನ್ನು ಸಲ್ಲಿಸಿದರು. ತಂಡದ ಕಲಾವಿದ ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು ಸ್ವಾಗತಿಸಿ ಕಾರ್ಯ ನಿರೂಪಿಸಿದರು, ತಂಡದ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು.