Published
6 months agoon
By
Akkare Newsಪುತ್ತೂರು: ಪಡುವನ್ನೂರು ಗ್ರಾಮದ ಗ್ರಾಮ ಸಹಾಯಕರು ಗ್ರಾಮಸ್ಥರಿಗೆ ಸರಕಾರಿ ಸೌಲಭ್ಯ ಪಡೆಯುವಲ್ಲಿ ತೊಂದರೆ ನೀಡುತ್ತಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕ ಮೂಲಭೂತ ಸೌಲಭ್ಯಗಳಾದ 946, 57, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆಯುವಲ್ಲಿ ಗ್ರಾಮ ಸಹಾಯಕರು ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುವ ರಘು ಎಂಬವರಿಂದ ಸಾರ್ವಜನಿಕರಿಗೆ ಸಂಬಂಧಪಟ್ಟಂತೆ ಮಹಿಳೆಯರ ಪಿಂಚಣಿ, ವಿಧವಾ ವೇತನ, ಜಾತಿ ಆದಾಯ, ವಾಸ್ತವ್ಯ ಸಂಬಂಧಿತ ಅಲ್ಲದೆ, ಸರಕಾರದಿಂದ ಮಂಜೂರಾಗರುವ ಸೌಲಭ್ಯಗಲಾದ 94C, 57 ಸಂಬಂಧಿಸಿದಂತ ಎಲ್ಲಾ ದಾಖಲೆಗಳ ಸೇರಿಸುವಿಕೆ ಸಂಬಂಧಿಸಿ ಜನ ಸಾಮಾನ್ಯರಿಗೆ ಅನಗತ್ಯವಾಗಿ ತುಂಬಾ ಕಿರುಕುಳ ನೀಡುತ್ತಿದ್ದು, ಅಲ್ಲದೇ ಬಿಜೆಪಿ ಪಕ್ಷದ ಕಟ್ಟಾಲುವಾಗಿ, ಕಾಂಗ್ರೆಸ್ ಕಾರ್ಯಕರ್ತರ ದಾಖಲೆಗಳಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ.
57 ಸಂಬಂಧಿಸಿ ಬಿಜೆಪಿ ಏಜಂಟನಾ ಗಿ, ನಮ್ಮ ಎಲ್ಲಾ ದಾಖಲೆಗಳಿಗೆ ಆಕ್ಷೇಪಣೆ ಸಿದ್ಧಪಡಿಸಿ ಕೊಳ್ಳುತ್ತಾ. ಹಲವಾರು ವರ್ಷಗಳಿಂದ ಹಿಂದೆ ನೀಡುತ್ತಿದ್ದು, ಈ ವ್ಯಕ್ತಿಯು ಎರಡು ಗ್ರಾಮದಲ್ಲೂ ತೊಂದರೆಯಾಗುತ್ತಿದೆ. ಈ ವ್ಯಕ್ತಿಗೆ ಎಕರೆ ಗಟ್ಟಲೆ ಭೂಮಿ ಅಕ್ರಮ ಸಕ್ರಮದಲ್ಲಿ ಕಾನೂನು ಬಾಹಿರವಾಗಿ ಮಂಜೂರು ಮಾಡಿಕೊಂಡಿದ್ದು. ಅಲ್ಲದೇ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು ಸರಕಾರದ ನಿಯಮಾವಳಿಗೆ ವಿರುದ್ಧವಾಗಿರುತ್ತದೆ. ಕೋಟ್ಯಂತರ ಬೆಲೆಬಾಳುವ ಎರಡು ಅಂತಸ್ತಿನ ಮನೆ ಹೊಂದಿದ್ದು, ಸರಕಾರಿ ಯಂತ್ರವನ್ನು ದುರುಪಯೋಗ ಪಡಿಸುತ್ತಾ ಅಕ್ರಮ ವ್ಯವಹಾರ, ಭ್ರಷ್ಟಾಚಾರ ದೊಂದಿಗೆ ಅಕ್ರಮ ಆಸ್ತಿ ಪಾಸ್ತಿ ಹೊಂದಿರುವರು.
ಅದುದರಿಂದ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಕೂಡಲೇ ಪಡುವನ್ನೂರು ಗ್ರಾಮದ ಗ್ರಾಮ ಸಹಾಯಕ ಸ್ಥಾನದಿಂದ ತೆರವೊಳಿಸ ಬೇಕೆಂದು, ಸಂಪೂರ್ಣ ತನಿಖೆ ನಡೆಸಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.