ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಕೊಟ್ಟ ಮಾತನ್ನು ತಪ್ಪಲಾರೆ ಮನೆ‌ಮನೆಗೆ ಹಕ್ಕು ಪತ್ರ ವಿತರಣೆ ಮಾಡಿಯೇ ಸಿದ್ದ: ಶಾಸಕ ಅಶೋಕ್ ರೈ

Published

on

ಪುತ್ತೂರು: ಚುನಾವಣಾ ಪ್ರಚಾರದ ವೇಳೆ ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ಎಂದು‌ತಪ್ಪಲಾರೆ ಗ್ರಾಮದ‌ಪ್ರತೀ‌ ಮನೆ ಮನೆಗೂ ಹಕ್ಕು ಪತ್ರ ತಲುಪಿಸುವ ಕೆಲಸವನ್ನು ಮಾಡಿಯೇ ಸಿದ್ದ ಇದರಲ್ಲಿ ಯಾವುದೇ ವೆತ್ಯಾಸಗಳೇ ಇಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.

 

ಅವರು ನೆಟ್ಡಣಿಗೆ ಮುಡ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಹಾಗೂ ಹಕ್ಕು‌ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಲಾಗಿದೆ. ಒಟ್ಟು 13000 ಅರ್ಜಿಗಳು ಇದೆ. ಇವೆಲ್ಲವನ್ನೂ ಹಂತ ಹಂತವಾಗಿ ವಿಲೇವಾರಿ ಮಾಡಿಯೇ ಮಾಡುತ್ತೇವೆ. ನನ್ನ ಅರ್ಜಿ ಏನಾಗಬಹುದೋ ಎಂಬ ಭಯ ಯಾರಿಗೂ ಬೇಡ ಖಂಡಿತವಾಗಿಯೂ ನಿಮಗೆ ಹಕ್ಕು‌ಪತ್ರ ಸಿಕ್ಕೇ ಸಿಗ್ತದೆ ಅನುಮಾನವೇ ಬೇಡ ಎಂದು ಹೇಳಿದರು.

ಅಕ್ರಮ ಸಕ್ರಮ/ 94 ಸಿ ಕೊಡುವುದೇ ನನ್ನ ಮುಖ್ಯ ಉದ್ದೇಶವಾಗಿತ್ತು:
ನಾನು ರಾಜಕೀಯಕ್ಕೆ ಬರುವ ಮೊದಲು ಅಕ್ರಮ ಸಕ್ರಮ ಮತ್ತು 94 ಸಿ ಮತ್ತು ಸಿಸಿ ಇದರಲ್ಲಿನ ಭೃಷ್ಟಾಚಾರತೆಯ ಬಗ್ಗೆ ಗೊತ್ತಿತ್ತು. ನಾನು ಶಾಸಕನಾದರೆ ಇವೆಲ್ಲವನ್ನೂ ಭೃಷ್ಟಾಚಾರವಿಲ್ಲದೆ ವಿಲೇವಾರಿ‌ಮಾಡುತ್ತಿದ್ದೆ ,ಬಡವರಿಗೆ ಸಹಾಯ ಮಾಡುತ್ತಿದ್ದೆ ಎಂಬ ಆಸೆ ಇತ್ತು. ಈಗ ನಾನು ಶಾಸಕನಾಗಿದ್ದೇನೆ ಆವತ್ತು ನಾನು ವ್ಯಕ್ತಪಡಿಸಿದ ಆಸೆಯನ್ನು ನಾನೇ ಈಡೇರಿಸಲಿದ್ದೇನೆ. ನಾನು ಎಂದೂ ಭೃಷ್ಟಾಚಾರದ ವಿರುದ್ದವೇ ಇದರಲ್ಲಿ ರಾಜಿಯೇ ಇಲ್ಲ ಎಂದು‌ಶಾಸಕರು ಹೇಳಿದರು.

 

 

ಕರ್ನಾಟಕದ ಪ್ರಥಮ ಭೈಠಕ್:
ಇದುವರೆಗೆ ರಾಜ್ಯದಲ್ಲಿ ಎಲ್ಲೂ ಅಕ್ರಮ ಸಕ್ರಮ ಭೈಠಕ್ ನಡೆದಿಲ್ಲ ಮೊದಲ ಬಾರಿಗೆ ಪುತ್ತೂರಿನಲ್ಲಿ ಬೈಠಕ್ ನಡೆದ ಆರಂಭದ ಅಂಗವಾಗಿ 12 ಕಡತಗಳನ್ನು ವಿಲೇವಾರಿ ಮಾಡಲಾಗುತ್ತದೆ. ಕಂದಾಯ ಸಚಿವರ ಬಳಿ ಒತ್ತಡ ತಂದು ಈ ಕಾರ್ಯವನ್ನು ಮಾಡುತ್ತಿದ್ದೇನೆ. 94 ಸಿ ಹಕ್ಕು ಪತ್ರ ಅರ್ಜಿ ಹಾಕಿದ ಎಲ್ಲರಿಗೂ ದೊರೆಯಲಿದೆ ಎಂದು ಹೇಳಿದರು.
ಒಟ್ಟು‌19 ಮಂದಿಗೆ 94 ಸಿ ಹಕ್ಕು ಪತ್ರವನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಶಾಸಕರು ತಿಳಿಸಿದ್ದು ಇದುವರೆಗೆ ಒಟ್ಡು 2400 ಹಕ್ಕು ಪತ್ರ ವಿತರಣೆ ನಡೆದಿದೆ ಎಂದು ಶಾಸಕರು ಹೇಳಿದರು.
ತಹಶಿಲ್ದಾರನ್ನು ನಾನೇ ಕರೆಸಿದ್ದು:
ಈಗಿನ ತಹಶಿಲ್ದಾರನ್ನು ನಮಗೆ ಕೊಡಿ‌ಎಂದು ಕಂದಾಯ‌ಸಚಿವರ ಬಳಿ ಒತ್ತಡ ತಂದು ಕರೆಸಿದ್ದೇನೆ. ಇವರು ತಹಶಿಲ್ದಾರ್ ಆಗಿದ್ದ ವೇಳೆ 28000 ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿದ್ದರು ಅದಕ್ಕಾಗಿ ಅವರನ್ನು ಕರೆಸಿದ್ದೇನೆ.‌ಮುಂದೆ ಅವರು ಪುತ್ತೂರು ತಾಲೂಕಿನಲ್ಲಿ ಬಾಕಿ ಇರುವ ಎಲ್ಲಾ ಕಡತಗಳನ್ನಹ ಸಮರ್ಪಕವಾಗಿ ವಿಲೇವಾರಿ ಮಾಡಲಿದ್ದಾರೆ ಎಂದು ಹೇಳಿದರು.

ರಾಜಕೀಯ ಮಾಡಲ್ಲ:
ಅಕ್ರಮ ಸಕ್ರಮ 94 ಸಿ ಹಕ್ಕು ಪತ್ರ ವಿತರಣೆ ಮಾಡುವಾಗ ರಾಜಕೀಯ ಮಾಡಲ್ಲ ಅದರ ಅಗತ್ಯವೂ ನನಗಿಲ್ಲ. ನಾನು ಶಾಸಕನಾದ ಮೇಲೆ ರಾಜಧರ್ಮ ಪಾಲಿಸಬೇಕು ,ರಾಜಧರ್ಮ ಪಾಲನೆ ಮಾಡದವರಾದರೆ ಜನಪ್ರತಿನಿಧಿಯಾಗಿ ಅರ್ಥವಿಲ್ಲ. ಅರ್ಹ ಎಲ್ಲರಿಗೂ ಹಕ್ಕು ಪತ್ರ ಕೊಡುವುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

ಲಂಚ ತಗೊಂಡ್ರೆ ಹೇಳಿ

ಅಕ್ರಮ ಸಕ್ರಮ ಫೈಲು ವಿಲೇವಾರಿ‌ಮಾಡುವಾಗ ಯಾರಾದ್ರು ಲಂಚ ಕೇಳಿದ್ರೆ ತಕ್ಷಣ ನನ್ನ‌ಗಮನಕ್ಕೆ ತನ್ನಿ .ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.

ವೋಟು ಹಾಕಲು ಮರೆಯಬೇಡಿ
ಬಹಳ ಕಷ್ಟಪಟ್ಟು‌ಸರಕಾರದ‌ಮೇಲೆ ಒತ್ತಡ ತಂದು ನಾನು ನನ್ನ ಕ್ಷೇತ್ರದ ಜನರ‌ಕಷ್ಟಗಳಿಗೆ‌ ಸ್ಪಂದನೆ ನೀಡಿದ್ದೇನೆ. ನಾನು ಯಾವುದೇ ಭೃಷ್ಟಾಚಾರಿಯಲ್ಲ, ಈ ಹಿಂದೆ ಅಕ್ರಮ ಸಕ್ರಮದಲ್ಲಿ‌ಏನೆಲ್ಲಾ ನಡೆಯುತ್ತಿತ್ತು ಈ ಬಾರಿ ಅದು ಇದು ನಡೆಯುವುದಿಲ್ಲ, ಅದೂ ಇದು‌ಮಾಡಲು‌ ಬಿಡುವುದೇ ಇಲ್ಲ.‌ನನಗೆ ಒಂದು ವೋಟು ಕೊಟ್ಟು ಕೃತಜ್ಞತೆ ಸಲ್ಲಿಸಿ ಎಂದು‌ಶಾಸಕರು‌ ಮನವಿ‌ಮಾಡಿದರು.

ತಹಶಿಲ್ದಾರ್ ಪುರಂದರ್ ರವರು ಮಾತನಾಡಿ‌ಕರ್ನಾಟಕದಲ್ಲೇ ಮೊದಲ ಅಕ್ರಮ‌ಸಕ್ರಮ ಬೈಠಕ್ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆರಂಭವಾಗಿದೆ.
ಕೃಷಿಗಾಗಿ ಸರಕಾರ‌ನೀಡಿರುವ ಭೂಮಿಯನ್ನು ಸಕ್ರಮ ಮಾಡುವುದು ಬೈಟಕ್ ಉದ್ದೇಶವಾಗಿದೆ. ಈ ಬಾರಿ ಆನ್ ಲೈನ್ ಮೂಲಕ ಅರ್ಜಿ ವಿಲೇವಾರಿ ಮಾಡಲಾಗುತ್ತದೆ. ಪಾರದರ್ಶಕವಾಗಿ ಇಲ್ಲಿ ಎಲ್ಲವೂ ನಡೆಯುತ್ತಿದೆ. ಅಕ್ರಮ ಸಕ್ರಮದಲ್ಲಿ ಅಕ್ರಮಕ್ಕೆ ಯಾವುದೇ ಅವಕಾಶವಿಲ್ಲ.
12 ಕಡತಗಳು‌ಆರಂಭದಲ್ಲಿ‌ ನೀಡಲಾಗುತ್ತದೆ.‌13000 ಅರ್ಜಿಗಳು ಬಾಕಿ ಇದೆ. ಅಕ್ರಮ‌ಸಕ್ರಮ ಮಂಜೂರಾದ ಬಳಿಕ ಹಕ್ಕು ಪತ್ರ ನೀಡಲಾಗುತ್ತದೆ ಆ ಬಳಿಕ ಫ್ಲಾಟಿಂಗ್ ನಂತರ ಆರ್ ಟಿ ಸಿ ನೀಡಲಾಗುತ್ತದೆ. ಅರ್ಹ ಪ್ರಕರಣಗಳನ್ನು ಇತ್ಯರ್ಥ ಮಾಡಲು ಮಾತ್ರ ಅವಕಾಶವಿದೆ. 94 ಸಿ ಹಕ್ಕು ಪತ್ರವನ್ನು ನೀಡಲಾಗುತ್ತದೆ ಎಂದು ಹೇಳಿದರು

ಅಕ್ರಮ ಸಕ್ರಮಕ್ಕೆ ಹೊಸ ಆ್ಯಾಪ್ ಇದು ಬಿಜೆಪಿ‌ಸರಕಾರದ ಕೊಡುಗೆ ಇಷ್ಟು ವರ್ಷಗಳಲ್ಲಿ‌ ಅಕ್ರಮ ಸಕ್ರಮ ಕಡತಗಳು ಮ್ಯಾನುವಲ್ ಆಗಿಯೇ ಮಾಡಲಾಗುತ್ತಿತ್ತು ಇದನ್ನು ಕಳೆದ ಅವಧಿಯ ಬಿಜೆಪಿ ಸರಕಾರ ಅ್ಯಾಪ್ ಜಾರಿಗೆ ತಂದಿದ್ದು ಅದರ‌ ಮೂಲಕ ಅಕ್ರಮ ಸಕ್ರಮ ಸಿಟ್ಟಿಂಗ್ ನಡೆಸಲಾಗುತ್ತದೆ. ಹೊಸ ಅ್ಯಾಪ್ ನಿಂದ ಜನರಿಗೆ ತೊಂದರೆಯಾಗುತ್ತದೆಯಾದರೂ ಸರಕಾರಿ‌ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಡಿನಲ್ಲೂ ಈ ಕಾನೂನು ಸಹಕಾರಿಯಾಗಲಿದೆ ಎಂದಜ‌ಸಮಿತಿ‌ಸದಸ್ಯ ಮಹಮದ್ ಬಡಗನ್ನೂರು ಹೇಳಿದರು.
ಹೊಸ ಅ್ಯಾಪ್ ಮೂಲಕ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ‌ಮಾಡಲು ತುಂಬಾ ಕಷ್ಡ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ.‌ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಇಂದು ಪುತ್ತೂರು ಕ್ಷೇತ್ರದಲ್ಲಿ ಅಕ್ರಮ‌ಸಕ್ರಮ ಬೈಠಕ್ ನಡೆಯುತ್ತಿರುವುದು ಶಾಸಕರ ಅಭಿವೃದ್ದಿ ಕಾಳಜಿಗೆ ಸಾಕ್ಷಿಯಾಗಿದೆ. ಇರುವ ಎಲ್ಲಾ‌ಅರ್ಜಿಗಳು ವಿಲೇವಾರಿಯಾಗಬೇಕು ಎಂಬುದು ಶಾಸಕರ ಉದ್ದೇಶವಾಗಿದೆ. ಮುಂದೆ ಹಂತ ಹಂತವಾಗಿ ಬೈಠಕ್ ಪ್ರತೀ ಗ್ರಾಮದಲ್ಲೂ ನಡೆಯಲಿದೆ ಎಂದು ಹೇಳಿದರು.
ನೆಟ್ಡಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ರವರು ಮಾತನಾಡಿ ಅಕ್ರಮ ಸಕ್ರಮ ಬೈಠಕ್ ಒಳ್ಳೆಯ ಯೋಜನೆಯಾಗಿದೆ . ಸರಕಾರ‌ಜನ ಪರ ಇದೆ ಮತ್ತು ಶಾಸಕರು ಬಡವರ ಎಂಬುದಕ್ಕೆ ಇಂಥಹ ಯೋಜನೆಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಸ್ವಾಗತ: ಗ್ರಾಪಂ ಆಡಳಿತಾಧಿಕಾರಿ ರಾಧಾಕೃಷ್ಣ,‌
ವೇದಿಕೆಯಲ್ಲಿ‌ಶಾಸಕರಾದ ಅಶೋಕ್ ರೈ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ‌ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪರೇಖ ಆಳ್ವ, ಗ್ರಾಪಂ ಅಧ್ಯಕ್ಷೆ ಫೌಝಿಯಾ, ಉಪಾಧ್ಯಕ್ಷ ರಾಮ‌ಕೆ ಮೇನಾಲ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement