Published
10 months agoon
By
Akkare Newsಹಾಸನ:ಜಿಲ್ಲೆ ಸಕಲೇಶಪುರ ತಾಲೂಕಿನ ಪ್ರವಾಸಿತಾಣ ಪಟ್ಲಬೆಟ್ಟಕ್ಕೆ ಬೈಕ್ನಲ್ಲಿ ಬಂದಿದ್ದ ಕೆಲ ಪ್ರವಾಸಗರ ಮೇಲೆ ಸ್ಥಳೀಯ ಜೀಪ್ ಹಾಗೂ ಪಿಕ್ಅಪ್ ವಾಹನ ಚಾಲಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಪ್ರವಾಸಿಗರು ದೂರು ದಾಖಲಿಸಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಾಸನ, ಜೂನ್.25: ಪಟ್ಲಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ (Assault) ನಡೆದಿರುವ ಆರೋಪ ಕೇಳಿ ಬಂದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪ್ರವಾಸಿತಾಣ ಪಟ್ಲಬೆಟ್ಟ ಬಳಿ ಸ್ಥಳೀಯ ಜೀಪ್ ಹಾಗೂ ಪಿಕ್ಅಪ್ ವಾಹನ ಚಾಲಕರು ಬೈಕ್ನಲ್ಲಿ ಬಂದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ.
ಜೂ.23ರಂದು ಕೆಲ ಪ್ರವಾಸಿಗರು ಬೈಕ್ನಲ್ಲಿ ಪಟ್ಲಬೆಟ್ಟಕ್ಕೆ ಹೋಗಿದ್ದರು. ಪಟ್ಲಬೆಟ್ಟಕ್ಕೆ ಭೇಟಿ ನೀಡಿ ವಾಪಸ್ ತೆರಳುವಾಗ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಜೀಪುಗಳನ್ನು ಬಾಡಿಗೆ ಪಡೆದು ಬಾರದೇ ತಮ್ಮ ಬೈಕ್ ಗಳಲ್ಲಿ ಹೋಗಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬೈಕ್ಗಳಲ್ಲಿ ಹೋಗಬೇಡಿ ಅಂದ್ರೂ ಯಾಕೆ ಹೋದ್ರಿ ಅಂತ ಚಾಲಕರು ಪ್ರಶ್ನೆ ಮಾಡಿದ್ದು ನಂತರ ಬೈಕ್ ಗಳಲ್ಲಿದ್ದ ಸವಾರರ ಮೇಲೆ ಜೀಪು ಚಾಲಕರು ಹಲ್ಲೆ ಮಾಡಿದ್ದಾರೆ.
ಈ ಘಟನೆ ಸಂಬಂಧ ದಕ್ಷಿಣ ಕನ್ನಡ ಮೂಲದ ಪ್ರವಾಸಿಗರಾದ ಭುವಿತ್ ಪೂಜಾರಿ ಎಂಬುವವರು ದೂರು ದಾಖಲಿಸಿದ್ದಾರೆ. ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರವಾಸಿ ಚಟುವಟಿಕೆಗಳ ಮೇಲೆ ಇಲಾಖೆ ಸೂಕ್ತ ನಿರ್ವಹಣೆ ಮಾಡುತ್ತಿಲ್ಲ ಎಂದು ಪ್ರವಾಸಿಗರು ಆಕ್ರೋಶ ಹೊರ ಹಾಕಿದ್ದಾರೆ.
ಸ್ನೂಕರ್ ಆಡುತ್ತಿದ್ದಾಗಲೇ ಉಸಿರು ಚೆಲ್ಲಿದ ಯುವಕ ಸ್ನೂಕರ್ ಆಡುತ್ತಿದ್ದಾಗಲೇ ಯುವಕನೊಬ್ಬ ಪ್ರಾಣ ಬಿಟ್ಟಿದ್ದಾನೆ. ಧಾರವಾಡ ರಜತಗಿರಿಯಲ್ಲಿ ಘಟನೆ ನಡೆದಿದ್ದು, ಸುಶಾಂತ ಮಲ್ಲಿಗೇರಿ ಎಂಬಾತ ಮೃತಪಟ್ಟಿದ್ದಾನೆ. ಮೂಲತ ಬಾಗಲಕೋಟೆಯ ಸುಶಾಂತ, ಧಾರವಾಡದಲ್ಲಿ ನೆಲೆಸಿದ್ದ. ನಿತ್ಯ ಸ್ನೂಕರ್ ಆಡುವ ಅಭ್ಯಾಸ ಹೊಂದಿದ್ದ. ಅದ್ರಂತೆ ನಿನ್ನೆ ಎಂದಿನಂತೆ ಗೆಳೆಯರೊಂದಿಗೆ ಸ್ನೂಕರ್ ಆಡುತ್ತಿದ್ದಾಗ ಎಕ್ದಂ ಕುಸಿದು ಬಿದ್ದು ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಕೊನೆಯ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಪ್ರಿಯತಮೆಯ ಖಾಸಗಿ ಅಂಗಕ್ಕೆ ಇರಿದು ಹತ್ಯೆ ಪ್ರಿಯತಮೆಯನ್ನ ಕೊಂದು ಬಳಿಕ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೊಸಕೋಟೆ ನಗರದ ಕಾಲೇಜು ರಸ್ತೆಯಲ್ಲಿ ಘಟನೆ ನಡೆದಿದ್ದು, ಆಂಧ್ರ ಮೂಲದ ಹೇಮಾವತಿ ಎಂಬಾಕೆ ಮೃತಪಟ್ಟಿದ್ದಾಳೆ. ಚಿಂತಾಮಣಿ ಮೂಲದ ವೇಣು ಎಂಬಾತ ಆಕೆಯನ್ನ ಬಾಡಿಗೆ ಮನೆಲಿಟ್ಟು ಆಗಾಗ ಬಂದು ಹೋಗ್ತಿದ್ದ. ಆದ್ರೆ ನಿನ್ನೆ ಮುಂಜಾನೆ ಆಕೆಯ ಮರ್ಮಾಂಗ ಸೇರಿ ಮೂರ್ನಾಲ್ಕು ಕಡೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತನ್ನೂರಿಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.